Bengaluru: ಕರ್ನಾಟಕದಾದ್ಯಂತ ಮಳೆ ಮತ್ತಷ್ಟು ಜೋರಾಗುತ್ತಿದ್ದು, (Heavy rains in Karnataka) ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್, ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜಾರಿಯಾಗಿದೆ.
ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲೂ ಮಳೆ ಸುರಿಯಲಿದೆ. ಕದ್ರಾ, ಸಿದ್ದಾಪುರ, ಗೇರುಸೊಪ್ಪ, ಕಾರ್ಕಳ, ಶಿರಾಲಿ, ಬಂಟವಾಳ, ಉಪ್ಪಿನಂಗಡಿ, ಮಂಗಳೂರು, ಕಾರವಾರ, ಬೀದರ್, ಅಂಕೋಲಾ, ಮೂಡುಬಿದಿರೆ, ಗೋಕರ್ಣ, ಕೋಟಾ, ಧರ್ಮಸ್ಥಳ, ಯಲ್ಲಾಪುರ, ಸುಳ್ಯ, ಪುತ್ತೂರು, ಕುಮಟಾ, ಶೃಂಗೇರಿ, ಸೋಮವಾರಪೇಟೆ, ಲೋಂಡಾ, ಖಾನಾಪುರ, ಕಲಬುರಗಿ, ಹಾವೇರಿ, ಗಂಗಾವತಿ ಸೇರಿದಂತೆ ಅನೇಕ ಕಡೆ ಭಾರಿ ಮಳೆಯಾಗಿದೆ.
ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇದೆ. ಎಚ್ಎಎಲ್‌ನಲ್ಲಿ ಗರಿಷ್ಠ ಉಷ್ಣಾಂಶ 28.5 ಡಿಗ್ರಿ, ಕನಿಷ್ಠ 19.5 ಡಿಗ್ರಿ ದಾಖಲಾಗಿದೆ. ನಗರದಲ್ಲಿ ಗರಿಷ್ಠ 28.0 ಡಿಗ್ರಿ, ಕನಿಷ್ಠ 20.3 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು, ಕೆಐಎಎಲ್‌ನಲ್ಲಿ ಗರಿಷ್ಠ 28.9 ಡಿಗ್ರಿ, ಜಿಕೆವಿಕೆಯಲ್ಲಿ ಗರಿಷ್ಠ 28.8 ಡಿಗ್ರಿ, ಕನಿಷ್ಠ 19.8 ಡಿಗ್ರಿ ದಾಖಲಾಗಿದೆ.
ಹೊನ್ನಾವರದಲ್ಲಿ ಗರಿಷ್ಠ 28.0 ಡಿಗ್ರಿ, ಕನಿಷ್ಠ 22.5 ಡಿಗ್ರಿ, ಕಾರವಾರದಲ್ಲಿ ಗರಿಷ್ಠ 28.2 ಡಿಗ್ರಿ, ಕನಿಷ್ಠ 24.4 ಡಿಗ್ರಿ, ಮಂಗಳೂರು ಏರ್ಪೋರ್ಟ್‌ನಲ್ಲಿ ಗರಿಷ್ಠ 27.4 ಡಿಗ್ರಿ, ಕನಿಷ್ಠ 22.7 ಡಿಗ್ರಿ, ಶಕ್ತಿನಗರದಲ್ಲಿ ಗರಿಷ್ಠ 28.1 ಡಿಗ್ರಿ, ಕನಿಷ್ಠ 22.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಳಗಾವಿ ಏರ್ಪೋರ್ಟ್‌ನಲ್ಲಿ ಗರಿಷ್ಠ 26.4 ಡಿಗ್ರಿ, ಕನಿಷ್ಠ 19.8 ಡಿಗ್ರಿ, ಬೀದರಿನಲ್ಲಿ ಗರಿಷ್ಠ 28.2 ಡಿಗ್ರಿ, ಕನಿಷ್ಠ 20.0 ಡಿಗ್ರಿ, ವಿಜಯಪುರದಲ್ಲಿ ಗರಿಷ್ಠ 29.0 ಡಿಗ್ರಿ, ಕನಿಷ್ಠ 21.5 ಡಿಗ್ರಿ, ಧಾರವಾಡದಲ್ಲಿ ಗರಿಷ್ಠ 25.8 ಡಿಗ್ರಿ, ಕನಿಷ್ಠ 19.5 ಡಿಗ್ರಿ ದಾಖಲಾಗಿದೆ.
ಗದಗದಲ್ಲಿ ಗರಿಷ್ಠ 19.5 ಡಿಗ್ರಿ, ಕನಿಷ್ಠ 20.8 ಡಿಗ್ರಿ, ಕಲಬುರಗಿಯಲ್ಲಿ ಗರಿಷ್ಠ 30.0 ಡಿಗ್ರಿ, ಕನಿಷ್ಠ 21.6 ಡಿಗ್ರಿ, ಹಾವೇರಿಯಲ್ಲಿ ಗರಿಷ್ಠ 23.8 ಡಿಗ್ರಿ, ಕನಿಷ್ಠ 20.6 ಡಿಗ್ರಿ, ಕೊಪ್ಪಳದಲ್ಲಿ ಗರಿಷ್ಠ 29.2 ಡಿಗ್ರಿ, ಕನಿಷ್ಠ 23.5 ಡಿಗ್ರಿ, ರಾಯಚೂರಿನಲ್ಲಿ ಗರಿಷ್ಠ 30.0 ಡಿಗ್ರಿ, ಕನಿಷ್ಠ 22.0 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.