Bengaluru (Bangalore) : Hebbal Flyover ನ Traffic ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವತ್ತ BBMP ಹೆಜ್ಜೆ ಹಾಕಿದೆ. ಈ ಹಿಂದೆ ವಿವಿಧ ಇಲಾಖೆಯ ಮುಖ್ಯಸ್ಥರು ಭೇಟಿ ನೀಡಿ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು ಆದರೆ ಯಾವುದೇ ಪ್ರಯೋಜನಗೊಂಡಿಲ್ಲ.
ಗುರುವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ (Tushar Giri Nath IAS) “ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಹೆಬ್ಬಾಳ ಮೇಲ್ಸೇತುವೆ ಅಗಲೀಕರಣ ಅನಿವಾರ್ಯವಾಗಿದ್ದು, 10 ಪಥದ ಮೇಲ್ಸೇತುವೆಯಾಗಿ (10 Line Flyover) ಅಗಲೀಕರಣ ಮಾಡಲು ಮುಖ್ಯಮಂತ್ರಿಗಳು (Basavaraj Bommai) ಅನುಮೋದನೆ ನೀಡಿದ್ದಾರೆ ಕೂಡಲೇ BDA ಯಿಂದ Tender ಆಹ್ವಾನಿಸಿ ನಿರ್ಮಾಣ ಕಾಮಗಾರಿ ಆರಂಭಿಸಲಿದೆ. ಸದ್ಯ ಬೆಂಗಳೂರು ನಗರದಿಂದ ವಿಮಾನ ನಿಲ್ದಾಣ (Kempegowda International Airport Bengaluru) ಕಡೆ ಸಾಗಲು ಮೂರು ಪಥ ಮತ್ತು ವಿಮಾನ ನಿಲ್ದಾಣದಿಂದ ಬೆಂಗಳೂರು ನಗರದ ಕಡೆ ಬರಲು ಎರಡು ಪಥವಿದ್ದು, ಅದನ್ನು ಅಗಲೀಕರಣ ಮಾಡಲು ತೀರ್ಮಾನಿಸಲಾಗಿದೆ” ಎಂದು ತಿಳಿಸಿದರು.