
ತಮಿಳುನಾಡು ಸರ್ಕಾರ (Tamil Nadu government) ಹಿಂದಿ (Hindi) ಹೇರಿಕೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಕೇಂದ್ರ ಸರ್ಕಾರವು ತ್ರಿಭಾಷಾ(Three Language Policy) ನೀತಿಯ (NEP) ಮೂಲಕ ಹಿಂದಿಯನ್ನು ಒತ್ತಾಯಿಸುತ್ತಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (Chief Minister M.K. Stalin) ಆರೋಪಿಸಿದ್ದಾರೆ.
ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Andhra Pradesh Deputy Chief Minister Pawan Kalyan) ಈ ಕುರಿತು ಪ್ರತಿಕ್ರಿಯಿಸಿ, “ನಾಯಕರು ಹಿಂದಿಯನ್ನು ವಿರೋಧಿಸುತ್ತಾರೆ, ಆದರೆ ಆರ್ಥಿಕ ಲಾಭಕ್ಕಾಗಿ ತಮಿಳು ಚಲನಚಿತ್ರಗಳನ್ನು ಹಿಂದಿಗೆ ಡಬ್ ಮಾಡುತ್ತಾರೆ” ಎಂದು ಟೀಕಿಸಿದ್ದಾರೆ.
ಜನಸೇನಾ ಪಕ್ಷದ 12ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಪವನ್ ಕಲ್ಯಾಣ್, “ತಮಿಳುನಾಡಿನ ರಾಜಕಾರಣಿಗಳು ಬಾಲಿವುಡ್‌ನಿಂದ ಹಣ ಮಾಡಬೇಕು, ಆದರೆ ಹಿಂದಿಯನ್ನು ತಿರಸ್ಕರಿಸುತ್ತಾರೆ, ಇದು ಯಾವ ರೀತಿಯ ತರ್ಕ?” ಎಂದು ಪ್ರಶ್ನಿಸಿದರು.
ಮಾರ್ಚ್ 13ರಂದು ಸಿಎಂ ಸ್ಟಾಲಿನ್ “NEP ಕೇಸರೀಕರಣದ ನೀತಿ” ಎಂದು ಕಿಡಿಕಾರಿದ್ದರು. ಇದರಿಂದ ತಮಿಳುನಾಡಿನ ಶಿಕ್ಷಣ ವ್ಯವಸ್ಥೆಗೆ ಹಾನಿ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ತಮಿಳುನಾಡು ಸರ್ಕಾರ, ರಾಜ್ಯ ಬಜೆಟ್‌ನಲ್ಲಿ ಅಧಿಕೃತ ಲೋಗೋದಲ್ಲಿ ₹ ಚಿಹ್ನೆಯ ಬದಲಿಗೆ “ರೂ.” ಬಳಕೆ ಮಾಡಲು ನಿರ್ಧರಿಸಿದ್ದು, ಈ ಕುರಿತು ಆದೇಶವನ್ನೂ ಹೊರಡಿಸಿದೆ.