
Washington: ಅಮೆರಿಕದಲ್ಲಿ ಭಾರೀ ಬಿರುಗಾಳಿ (storm) ಎದ್ದಿದ್ದು, ಭಾರಿ ವಿನಾಶದ ಭೀತಿ ಮೂಡಿಸಿದೆ. ಮಿಸ್ಸಿಸ್ಸಿಪ್ಪಿ ಕಣಿವೆಯಲ್ಲಿ ಸುಂಟರಗಾಳಿ, ಉತ್ತರ ಬಯಲು ಪ್ರದೇಶದಲ್ಲಿ ಹಿಮ ಬಿರುಗಾಳಿ ಮತ್ತು ಟೆಕ್ಸಾಸ್ ಹಾಗೂ ಒಕ್ಲಹೋಮಾದಲ್ಲಿ ಕಾಡ್ಗಿಚ್ಚು ಉಂಟಾಗುವ ಸಾಧ್ಯತೆ ಇದೆ.
ನ್ಯೂಯಾರ್ಕ್ ಹವಾಮಾನ ತಜ್ಞರ ಪ್ರಕಾರ, ಈ ಭೀಕರ ಚಂಡಮಾರುತ 100 ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಬಹುದು. ಕೆನಡಾದ ಗಡಿಯಿಂದ ಟೆಕ್ಸಾಸ್ ವರೆಗೆ ಬಲವಾದ ಗಾಳಿ ಬೀಸಲಿದ್ದು, ಕೆಲವು ಕಡೆಗಳಲ್ಲಿ ಗಂಟೆಗೆ 160 ಕಿಮೀ ವೇಗ ತಲುಪಬಹುದು. ಜನತೆಗೆ ಎಚ್ಚರಿಕೆ ವಹಿಸಲು ರಾಷ್ಟ್ರೀಯ ಹವಾಮಾನ ಸೇವೆ (NWS) ಮುನ್ಸೂಚನೆ ನೀಡಿದೆ.