
ಆಧುನಿಕ ಜೀವನಶೈಲಿ ಹಾಗೂ ಬದಲಾದ ಆಹಾರ ಕ್ರಮದಿಂದ ಅನೇಕರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ತಜ್ಞರ ಪ್ರಕಾರ, ಔಷಧಿ ಇಲ್ಲದೆ ಸಹ ನೈಸರ್ಗಿಕವಾಗಿ BP ನಿಯಂತ್ರಿಸಲು ಸಾಧ್ಯ.
BP ನಿಯಂತ್ರಿಸಲು ಸಹಾಯಕ ಉಪಾಯಗಳು
- ವ್ಯಾಯಾಮ ಮತ್ತು ವಾಕಿಂಗ್: ವಾರಕ್ಕೆ ಕನಿಷ್ಠ 150 ನಿಮಿಷಗಳ ವಾಕಿಂಗ್ ಮತ್ತು 75 ನಿಮಿಷಗಳ ವ್ಯಾಯಾಮ ಮಾಡುವುದು ಉತ್ತಮ.
- ಪೊಟ್ಯಾಸಿಯಂಯುಕ್ತ ಆಹಾರ: ತಾಜಾ ತರಕಾರಿ, ಹಣ್ಣುಗಳು, ಸೊಪ್ಪುಗಳು, ಡೈರಿ ಉತ್ಪನ್ನಗಳು, ಧಾನ್ಯಗಳು ಹಾಗೂ ದ್ವಿದಳ ಧಾನ್ಯಗಳನ್ನು ಸೇವಿಸಬೇಕು.
- ಪೂರಕ ಆಹಾರ ಸೇವನೆ: ಮೀನಿನ ಎಣ್ಣೆ, ದಾಸವಾಳದ ಚಹಾ, ಹಾಲೊಡಕು ಪ್ರೋಟೀನ್, ಬೆಳ್ಳುಳ್ಳಿ ಸೇವನೆ.
- ಮೆಗ್ನೀಸಿಯಂ ಸಮೃದ್ಧ ಆಹಾರ: ತರಕಾರಿಗಳು, ಡೈರಿ ಉತ್ಪನ್ನಗಳು, ಕೋಳಿ ಮಾಂಸ, ಧಾನ್ಯಗಳು.
- ಕ್ಯಾಲ್ಸಿಯಂಯುಕ್ತ ಆಹಾರ: ಹಾಲು ಮತ್ತು ಹಾಲು ಉತ್ಪನ್ನಗಳು.
- ಉಪ್ಪಿನ ಸೇವನೆ ಕಡಿಮೆ: ಸೋಡಿಯಂ ಅಧಿಕವಾಗಿರುವುದರಿಂದ ಉಪ್ಪಿನ ಪ್ರಮಾಣವನ್ನು ನಿಯಂತ್ರಿಸಬೇಕು.
- ಮದ್ಯ ಸೇವನೆ ನಿಯಂತ್ರಣ: ಮಿತವಾಗಿ ಮದ್ಯ ಸೇವಿಸಬೇಕು.
- ಕೆಫೀನ್ ಸೇವನೆ ಕಡಿಮೆ: ಕಡಿಮೆ ಪ್ರಮಾಣದಲ್ಲಿ ಮಾತ್ರ ಚಹಾ ಮತ್ತು ಕಾಫಿ ಸೇವಿಸಬೇಕು.
- ಡಾರ್ಕ್ ಚಾಕೊಲೇಟ್ ಮತ್ತು ಕೋಕೋ: ಇದರಲ್ಲಿರುವ ಪೌಷ್ಠಿಕಾಂಶಗಳು ಬಿಪಿ ನಿಯಂತ್ರಣಕ್ಕೆ ಸಹಾಯಕ.
- ತೂಕ ನಿಯಂತ್ರಣ: ತೂಕ ಹೆಚ್ಚಾದರೆ ಬಿಪಿ ನಿಯಂತ್ರಣ ಕಷ್ಟವಾಗಬಹುದು.
- ಧೂಮಪಾನ ನಿಲ್ಲಿಸಿ: ಧೂಮಪಾನ ಆರೋಗ್ಯಕ್ಕೆ ಅಪಾಯಕಾರಿ.
- ಸಕ್ಕರೆ ಮತ್ತು ಸಂಸ್ಕರಿತ ಆಹಾರ ತ್ಯಜಿಸಿ: ಆರೋಗ್ಯಕರ ಆಹಾರ ಸೇವಿಸಬೇಕು.
- ಹಣ್ಣುಗಳ ಸೇವನೆ: ಪಾಲಿಫಿನಾಲ್ ಗಳು ಅಧಿಕವಾಗಿರುವ ಹಣ್ಣುಗಳು ರಕ್ತದೊತ್ತಡ ಕಡಿಮೆಗೆ ಸಹಾಯ ಮಾಡುತ್ತವೆ.
- ಧ್ಯಾನ ಮತ್ತು ಪ್ರಾಣಾಯಾಮ: ಮನಸ್ಸು ಶಾಂತವಾಗಿರಲು ಧ್ಯಾನ ಹಾಗೂ ಪ್ರಾಣಾಯಾಮ ಅಭ್ಯಾಸ ಮಾಡಬೇಕು.
- ಆರೋಗ್ಯಕರ ನಿದ್ರೆ: ದಿನಕ್ಕೆ ಕನಿಷ್ಠ 7-8 ಗಂಟೆಗಳ ನಿದ್ರೆ ಅಗತ್ಯ.
- ಒತ್ತಡ ನಿಯಂತ್ರಣ: ಸಂಗೀತ ಕೇಳುವುದು, ಯೋಗ ಅಭ್ಯಾಸ, ಹವ್ಯಾಸಗಳಲ್ಲಿ ತೊಡಗುವುದು ಒತ್ತಡವನ್ನು ಕಡಿಮೆ ಮಾಡಬಹುದು.
ಸಾಮಾನ್ಯ ರಕ್ತದೊತ್ತಡ ಪ್ರಮಾಣ
- 120/80 mm Hg – ಸಾಮಾನ್ಯ
- 120/80 – 129/79 mm Hg – ಹೆಚ್ಚಿದ ಬಿಪಿ
- 130/80 – 139/89 mm Hg – ಹಂತ 1 ಅಧಿಕ ರಕ್ತದೊತ್ತಡ
- 140/90 mm Hg ಅಥವಾ ಹೆಚ್ಚು – ಹಂತ 2 ಅಧಿಕ ರಕ್ತದೊತ್ತಡ
- 180/120 mm Hg ಗಿಂತ ಹೆಚ್ಚು – ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಅರಿವುಗಾಗಿ ಮಾತ್ರ. ನೀವು ಯಾವುದೇ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ, ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.