New Delhi: ನಗರ ಪ್ರದೇಶಗಳಲ್ಲಿ ಸೇವಿಂಗ್ಸ್ ಅಕೌಂಟ್‌ಗಾಗಿ ಮಿನಿಮಮ್ ಬ್ಯಾಲನ್ಸ್ ಮೊದಲು 50,000 ರೂಗೆ ಏರಿಸಿದ್ದ ಐಸಿಐಸಿಐ ಬ್ಯಾಂಕ್, (ICICI bank) ಈಗ ಅದನ್ನು 15,000 ರೂಗೆ ಇಳಿಸಿದೆ. ಆಗಸ್ಟ್ 1ರಿಂದ ಹೊಸ ಖಾತೆ ತೆರೆಯುವವರು 10,000 ರೂ ಬದಲು 50,000 ರೂ ಇಡಬೇಕೆಂದು ನಿಯಮಿಸಿದ್ದರೂ, ಟೀಕೆಗಳ ನಂತರ ಇದನ್ನು ಪರಿಷ್ಕರಿಸಲಾಗಿದೆ.
“2025ರ ಆಗಸ್ಟ್ 1ರಿಂದ ಹೊಸ ಉಳಿತಾಯ ಖಾತೆಗಳಿಗೆ ಎಂಎಬಿ ನಿಯಮ ಜಾರಿಗೆ ತಂದಿದ್ದೇವೆ. ಗ್ರಾಹಕರ ಸಲಹೆಗಳನ್ನು ಗಮನಿಸಿ, ಅವರ ನಿರೀಕ್ಷೆ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಪರಿಷ್ಕರಣೆ ಮಾಡಿದ್ದೇವೆ” ಎಂದು ಐಸಿಐಸಿಐ ಬ್ಯಾಂಕ್ ತಿಳಿಸಿದೆ.
ಹೊಸ ಮಿನಿಮಮ್ ಬ್ಯಾಲನ್ಸ್ ನಿಯಮಗಳು
- ನಗರ ಪ್ರದೇಶ: 15,000 ರೂ
- ಸೆಮಿ ಅರ್ಬನ್ / ಪಟ್ಟಣಗಳು: 7,500 ರೂ
- ಗ್ರಾಮೀಣ ಭಾಗ: 2,500 ರೂ
- ಕೊರತೆ ಇದ್ದರೆ 500 ರೂ ಅಥವಾ ಕೊರತೆಯ ಮೊತ್ತದ 6% ದಂಡ.
ಇತರ ಬ್ಯಾಂಕ್‌ಗಳ ಮಿನಿಮಮ್ ಬ್ಯಾಲನ್ಸ್
- HDFC ಬ್ಯಾಂಕ್: 25,000 ರೂ (ಮೊದಲು 10,000 ರೂ)
- HDFC ಫಸ್ಟ್ ಬ್ಯಾಂಕ್: 25,000 ರೂ
- ಎಕ್ಸಿಸ್ ಬ್ಯಾಂಕ್: 12,000 ರೂ
- ಬ್ಯಾಂಕ್ ಆಫ್ ಬರೋಡಾ: 2,000 ರೂ
- ಎಸ್ಬಿಐ: ಶೂನ್ಯ ಬ್ಯಾಲನ್ಸ್ ಖಾತೆ
ಪ್ರತಿ ದಿನಾಂತ್ಯದಲ್ಲಿ ಖಾತೆಯಲ್ಲಿ ಇರುವ ಮೊತ್ತವನ್ನು ಸೇರಿಸಿ, ಆ ತಿಂಗಳ ದಿನಗಳ ಸಂಖ್ಯೆಯಿಂದ ಭಾಗಿಸಿದರೆ ಮಾಸಿಕ ಸರಾಸರಿ ಬ್ಯಾಲನ್ಸ್ ಸಿಗುತ್ತದೆ.