ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು, ಭಾರತದಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು USAID ನೀಡುತ್ತಿದ್ದ 21 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಅನುದಾನವನ್ನು ರದ್ದುಗೊಳಿಸುವುದಾಗಿ ಹೇಳಿದ್ದಾರೆ.
ಟ್ರಂಪ್ ಅವರು, “ಭಾರತದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನನಗೆ ಗೌರವವಿದೆ. ಆದರೆ, ಭಾರತಕ್ಕೆ ಇಷ್ಟು ದೊಡ್ಡ ಮೊತ್ತವನ್ನು ನೀಡುವುದು ಸಾಧ್ಯವಿಲ್ಲ. ಅವರ ಬಳಿ ಸಾಕಷ್ಟು ಹಣವಿದೆ. ಮತದಾನ ಪ್ರಮಾಣ ಹೆಚ್ಚಿಸಲು ಅಮೆರಿಕನ್ ನಾಗರಿಕರ ತೆರಿಗೆ ಹಣ ಬಳಸದೆಯೇಬೇಕು” ಎಂದು ಹೇಳಿದ್ದಾರೆ.
ಟ್ರಂಪ್ ಅವರ ಹೇಳಿಕೆ ಕುರಿತು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Indian Foreign Ministry spokesperson Randhir Jaiswal) ಪ್ರತಿಕ್ರಿಯಿಸಿ, “ಈ ಹೇಳಿಕೆ ತೀವ್ರ ಕಳವಳಕಾರಿ. ಅಮೆರಿಕದ ಕೆಲವು ಚಟುವಟಿಕೆಗಳು ಹಾಗೂ ನಿಧಿಯ ಕುರಿತು ನಾವು ಗಮನಹರಿಸಿದ್ದೇವೆ. ಇದು ಭಾರತದ ಆಂತರಿಕ ವ್ಯವಹಾರದಲ್ಲಿ ವಿದೇಶಿ ಹಸ್ತಕ್ಷೇಪದ ಸಾಧ್ಯತೆ ಮೂಡಿಸುತ್ತದೆ. ಸಂಬಂಧಿತ ಇಲಾಖೆಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿವೆ” ಎಂದು ತಿಳಿಸಿದ್ದಾರೆ.
ಮಿಯಾಮಿಯಲ್ಲಿ ನಡೆದ FII ಶೃಂಗಸಭೆಯಲ್ಲಿ ಟ್ರಂಪ್ ಅವರು, “ಭಾರತ ಪ್ರಪಂಚದಲ್ಲೇ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಒಂದಾಗಿದೆ. ಅಲ್ಲದೆ, ಸುಂಕ ನೀತಿಯಿಂದಲೂ ಲಾಭ ಪಡೆಯುತ್ತಿದೆ. ಹಾಗಾದರೆ, ಮತದಾನ ಪ್ರಮಾಣ ಹೆಚ್ಚಿಸಲು ನಾವು ಭಾರತಕ್ಕೆ ಅನುದಾನ ನೀಡಬೇಕೇ?” ಎಂದು ಪ್ರಶ್ನಿಸಿದ್ದಾರೆ.