New Delhi, India : ಕೇಂದ್ರವು COVID-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಹೆಚ್ಚಿಸಲು ಇಂದು ಇನ್ನೂ ಎರಡು ಲಸಿಕೆಗಳು (Vaccine) ಕಾರ್ಬೆವಾಕ್ಸ್ (Corbevax) ಮತ್ತು ಕೋವೊವಾಕ್ಸ್ (Covovax) ಹಾಗೂ ಒಂದು ಆಂಟಿ-ವೈರಲ್ ಔಷಧ (Anti-Viral Drug) ಬಳಕೆಗೆ ಅನುಮತಿ ನೀಡಿದೆ. ಕೇಂದ್ರ ಅನುಮತಿ ನೀಡಿರುವ ಆಂಟಿವೈರಲ್ ಡ್ರಗ್ ಮೊಲ್ನುಪಿರವಿರ್ (Molnupiravir) ಅನ್ನು ತುರ್ತು ಸಮಯದಲ್ಲಿ ಕೋವಿಡ್ ತೀವ್ರತೆಯನ್ನು ತಡೆಗಟ್ಟಲು ಬಳಸಬಹುದಾಗಿದೆ.
Corbevax ಭಾರತದ ಮೊದಲ ಸ್ವದೇಶಿ “RBD protein sub-unit vaccine” ಆಗಿದ್ದು ಹೈದರಾಬಾದ್ ಮೂಲದ ಸಂಸ್ಥೆ ಬಯೋಲಾಜಿಕಲ್-ಇ (Biological-E) ಇದನ್ನು ಅಭಿವೃದ್ಧಿಪಡಿಸಿದೆ.
ನ್ಯಾನೊಪರ್ಟಿಕಲ್ (Nanoparticle) ಆಧಾರಿತ ಲಸಿಕೆ ಕೋವೊವ್ಯಾಕ್ಸ್ (Covovax) ಅನ್ನು ಪುಣೆ ಮೂಲದ ಎಸ್‌ಐಐ (SII – Serum Institute of India) ತಯಾರಿಸಲಿದೆ ಮತ್ತು ಆಂಟಿ-ವೈರಲ್ ಡ್ರಗ್ ಮೊಲ್ನುಪಿರವಿರ್ ಔಷಧಿಯು COVID-19 ರೋಗದ ತೀವ್ರತೆಯ ಅಪಾಯವನ್ನು ಎದುರಿಸುವ ವಯಸ್ಕರಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಿದ್ದು ಇದನ್ನು ಭಾರತದಲ್ಲಿ 13 ಕಂಪನಿಗಳು ತಯಾರಿಸಲಿವೆ. ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ ಈ ಔಷಧಿಯನ್ನು ಉಪಯೋಗಿಸಲು ಕೇಂದ್ರ ಅನುಮತಿ ನೀಡಿದೆ.
ಇಂದಿನ ಅನುಮೋದನೆಯಿಂದಿಗೆ, ಒಟ್ಟು ಎಂಟು COVID-19 ಲಸಿಕೆಗಳು Covishield, Covaxin, ZyCoV-D, Sputnik V, Moderna, Johnson and Johnson, Covovax ಮತ್ತು Corbevax ಭಾರತದ ಔಷಧ ನಿಯಂತ್ರಕದಿಂದ ತುರ್ತು ಬಳಕೆಯ ಅಧಿಕಾರದ ಅಡಿಯಲ್ಲಿ ಅನುಮೋದನೆ ಪಡೆದಿವೆ.