ಇಂದಿನಿಂದ ನವದೆಹಲಿಯಲ್ಲಿ ಆರಂಭವಾಗಲಿರುವ ಭಾರತದ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ 2025, (India Mobility Global Expo 2025) ಪ್ರಗತಿ ಮೈದಾನ, ದ್ವಾರಕಾ ಮತ್ತು ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ಪೋ ಸೆಂಟರ್‌ನಲ್ಲಿ ಆಯೋಜನೆಗೊಂಡಿದೆ. ಈ ಪ್ರದರ್ಶನದಲ್ಲಿ ದ್ವಿಚಕ್ರ ವಾಹನಗಳು, ಪ್ಯಾಸೆಂಜರ್ ಮತ್ತು ಕಮರ್ಶಿಯಲ್ ವೆಹಿಕಲ್‌ಗಳ ಕಂಪನಿಗಳು ತಮ್ಮ ಮುಂದಿನ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲಿವೆ.
ಭಾರತ್ ಮಂಟಪದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಎಕ್ಸ್ಪೋವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಮಾಧ್ಯಮ ದಿನ, ಡೀಲರ್ ದಿನ ಮತ್ತು ಜನವರಿ 19 ರಿಂದ 22 ರವರೆಗೆ ಇದು ಸಾರ್ವಜನಿಕರಿಗೆ ತೆರೆದಿರುತ್ತದೆ.
ದ್ವಿಚಕ್ರ ವಾಹನ ವಿಭಾಗದಲ್ಲಿ ಹೀರೋ ಮೋಟೋಕಾರ್ಪ್ ಮತ್ತು ಸುಜುಕಿ, ಪ್ರಯಾಣಿಕ ವಾಹನ ವಿಭಾಗದಲ್ಲಿ Maruti, Hyundai, Tata, Kia, JSW, MG, Skoda ಕಂಪನಿಗಳು ಭಾಗವಹಿಸಲಿವೆ. ಐಷಾರಾಮಿ ಕಾರು ತಯಾರಕರು Mercedes, BMW ಮತ್ತು ಪೋರ್ಷೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ.
ಇಂಡಿಯಾ ಮೊಬಿಲಿಟಿ ಎಕ್ಸ್ಪೋ 2025, ಇವಿ (ಎಲೆಕ್ಟ್ರಿಕ್ ವಾಹನಗಳು) ಮತ್ತು ಹೊಸ ತಂತ್ರಜ್ಞಾನಗಳನ್ನು ಬಹಿರಂಗಗೊಳಿಸಲು ವೇದಿಕೆಯಾಗಲಿದೆ. 2030 ರ ವೇಳೆಗೆ ಪ್ಯಾಸೆಂಜರ್ ವೆಹಿಕಲ್ ವಲಯದಲ್ಲಿ 30% ವಿದ್ಯುದೀಕರಣ ಗುರಿಯನ್ನು ಸರ್ಕಾರ ಹೊಂದಿದೆ.
ಈ ಎಕ್ಸ್ಪೋದಲ್ಲಿ ಭಾಗವಹಿಸಲು ಶುಲ್ಕವಿಲ್ಲ. ಆದರೆ, ಭಾಗವಹಿಸಲು www.bharat-mobility.com ನಲ್ಲಿ ನೋಂದಣಿ ಮಾಡಬೇಕಾಗುತ್ತದೆ. ಈ ಶೋ ಜನವರಿ 19 ರಿಂದ 22 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.