HomeBusiness2038ಕ್ಕೆ ಅಮೆರಿಕನಿಗಿಂತ ಭಾರತ ಆರ್ಥಿಕ ಶಕ್ತಿಯಲ್ಲಿ ಮುಂದೆ – IMF ಅಂದಾಜು

2038ಕ್ಕೆ ಅಮೆರಿಕನಿಗಿಂತ ಭಾರತ ಆರ್ಥಿಕ ಶಕ್ತಿಯಲ್ಲಿ ಮುಂದೆ – IMF ಅಂದಾಜು

- Advertisement -
- Advertisement -

New Delhi: ಭಾರತದ ಆರ್ಥಿಕತೆ ಮುಂದಿನ ವರ್ಷಗಳಲ್ಲಿ ಜಗತ್ತಿನಲ್ಲಿ ಎರಡನೇ ಅತಿದೊಡ್ಡದಾಗಲಿದೆ (India to overtake US in economic power by 2038) ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜು ಮಾಡಿದೆ. ಇವೈ (EY) ಸಂಸ್ಥೆ ಬಿಡುಗಡೆ ಮಾಡಿದ ವರದಿ ಪ್ರಕಾರ, 2038ರ ವೇಳೆಗೆ ಭಾರತದ ಪಿಪಿಪಿ ಆಧಾರಿತ ಜಿಡಿಪಿ (GDP on PPP terms) 34.2 ಟ್ರಿಲಿಯನ್ ಡಾಲರ್ ತಲುಪಲಿದೆ.

ಈಗ (2025) ಭಾರತೀಯ ಕೆಲಸಗಾರರ ಸರಾಸರಿ ವಯಸ್ಸು ಕೇವಲ 28.8 ವರ್ಷ. ಇದು ದೊಡ್ಡ ಆರ್ಥಿಕತೆಗಳ ಪೈಕಿ ಅತ್ಯುತ್ತಮ. ಜೊತೆಗೆ, ಉಳಿತಾಯ ದರ ಹೆಚ್ಚು, ಸರ್ಕಾರದ ಸಾಲದ ಪ್ರಮಾಣ ಕಡಿಮೆಯಾಗುತ್ತಿದೆ. 2024ರಲ್ಲಿ ಸಾಲ ಜಿಡಿಪಿಯ 81.3% ಇತ್ತು, 2030ರಲ್ಲಿ ಅದು 75.8%ಕ್ಕೆ ಇಳಿಯಬಹುದು.

ಚೀನಾದ ಜಿಡಿಪಿ (ಪಿಪಿಪಿ) 2030ರಲ್ಲಿ 42.2 ಟ್ರಿಲಿಯನ್ ಡಾಲರ್ ತಲುಪಲಿದೆ. ಆದರೆ, ಚೀನಾದ ಸಾಲದ ಮಟ್ಟ ಹಾಗೂ ವಯಸ್ಸಾದ ಜನಸಂಖ್ಯೆ ಆರ್ಥಿಕ ವೇಗ ಕುಂದಿಸಲಿದೆ. ಅಮೆರಿಕದ ಸಾಲದ ಮಟ್ಟ ಹೆಚ್ಚುತ್ತಲೇ ಹೋಗುವುದರಿಂದ ಅದರ ಬೆಳವಣಿಗೆ ನಿಧಾನವಾಗಲಿದೆ.

ರಿಯಲ್ ಜಿಡಿಪಿ ಲೆಕ್ಕದಲ್ಲಿ ಭಾರತ 2047ರ ವೇಳೆಗೆ 30 ಟ್ರಿಲಿಯನ್ ಡಾಲರ್ ತಲುಪುವ ಗುರಿ ಹೊಂದಿದೆ. ಆದರೆ ಅಮೆರಿಕ ಮತ್ತು ಚೀನಾವನ್ನು ಹಿಂದಿಕ್ಕಲು ಇನ್ನೂ ಕೆಲವು ವರ್ಷಗಳು ಬೇಕಾಗಬಹುದು.

ಪಿಪಿಪಿ ಎಂದರೇನು?

  • ಜಿಡಿಪಿ (GDP) = ಒಂದು ದೇಶದಲ್ಲಿ ಉತ್ಪಾದನೆಯಾಗುವ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ.
  • ನಾಮಿನಲ್ ಜಿಡಿಪಿ = ಪ್ರಸಕ್ತ ಹಣದ ಮೌಲ್ಯ ಆಧಾರ.
  • ರಿಯಲ್ ಜಿಡಿಪಿ = ಹಣದುಬ್ಬರವನ್ನು ಸೇರಿಸಿ ಲೆಕ್ಕ.
  • ಪಿಪಿಪಿ (Purchasing Power Parity) = ಒಂದೇ ವಸ್ತು ಬೇರೆ ಬೇರೆ ದೇಶಗಳಲ್ಲಿ ಎಷ್ಟು ಬೆಲೆಯಲ್ಲಿ ಸಿಗುತ್ತದೆ ಎಂಬ ಆಧಾರದಲ್ಲಿ ಲೆಕ್ಕ.

ಉದಾಹರಣೆ: ಅಮೆರಿಕದಲ್ಲಿ ಒಂದು ಆಟಿಕೆಯ ಬೆಲೆ $100. ಭಾರತದಲ್ಲಿ ಅದೇ ಆಟಿಕೆ ₹15,000. ಡಾಲರ್ ವಿನಿಮಯ ದರ ₹87.79 ಇದ್ದರೆ, ಭಾರತದಲ್ಲಿ ಬೆಲೆ $170 ಆಗುತ್ತದೆ. ಅಂದರೆ, ಪಿಪಿಪಿ = 170/100 = 1.7.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here

Captcha verification failed!
CAPTCHA user score failed. Please contact us!