Centurion, South Africa : ದಕ್ಷಿಣ ಆಫ್ರಿಕಾದ Centurion ನ SuperSport Park ನಲ್ಲಿ ಭಾನುವಾರ ನಡೆದ ಭಾರತ – ದಕ್ಷಿಣ ಆಫ್ರಿಕಾ ಕ್ರಿಕೆಟ್ 5 ದಿನದ ಟೆಸ್ಟ್ ಪಂದ್ಯಾವಳಿಯಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಆರಂಭದ ಮೊದಲ Test ನಲ್ಲಿ ಕನ್ನಡಿಗ KL Rahul ಅವರ ಅದ್ಭುತ ಶತಕದ ನೆರವಿನಿಂದ ಭಾರತ ಮೊದಲ ದಿನ ಮೇಲುಗೈ ಸಾಧಿಸಿದೆ.
ಭಾರತ ತಂಡದ ನಾಯಕ Virat Kohli ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದರು. ಇನಿಂಗ್ಸ್ ಆರಂಭಿಸಿದ ಕನ್ನಡಿಗರಾದ Mayank Agarwal ಮತ್ತು Rahul ಶತಕದ ಜೊತೆಯಾಟವಾಡಿದರು. 40.2 Over ನಲ್ಲಿ 117 ರನ್ ಗಳಿಸಿದ್ದಾಗ Lungi Ngidi ಯ ಎಸೆತದಲ್ಲಿ 60 ರನ್ ಗಳಿಸಿದ್ದ ಅಗರ್ವಾಲ್ LBW ಬಲೆಗೆ ಬಿದ್ದರು. ನಂತರ ಕ್ರೀಸ್ ಗಿಳಿದ Cheteshwar Pujara ಮೊದಲ ಎಸೆತದಲ್ಲಿಯೇ ಔಟಾದರು.
ಬಳಿಕ ಕೆ ಎಲ್ ರಾಹುಲ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ 82 ರನ್‌ಗಳ ಜೊತೆಯಾಟವಾಡಿದರು. Kohli 35 ರನ್ ಗಳಿಸಿ Lungi Ngidi ಯ ಎಸೆತದಲ್ಲಿ Mulder ಗೆ Catch ನೀಡುವ ಮೂಲಕ ಔಟ್ ಆದರು. ಮೊದಲ ದಿನದಾಂತ್ಯಕ್ಕೆ ಕೆ.ಎಲ್ ರಾಹುಲ್ 122 ರನ್ ಮತ್ತು Ajinkya Rahane 40 ರನ್ ನೊಂದಿಗೆ ಭಾರತ 3 ವಿಕೇಟ್ ನಷ್ಟಕ್ಕೆ 272 ರನ್ ಗಳಿಸಿತು. ದಕ್ಷಿಣ ಆಫ್ರಿಕಾ ಪರ Lungi 3 ವಿಕೇಟ್ ಪಡೆದು ಮಿಂಚಿದರು.
Image courtesy: Indian Cricket Team