Centurion, South Africa : SuperSport Park ಕ್ರೀಡಾಂಗಣದಲ್ಲಿ ಗುರುವಾರ ಮುಕ್ತಾಯವಾದ ಮೊದಲ ಟೆಸ್ಟ್‌ನಲ್ಲಿ ಭಾರತ, ದಕ್ಷಿಣ ಆಫ್ರಿಕಾ (India Vs South Africa) ವಿರುದ್ಧ 113 ರನ್‌ಗಳ ಐತಿಹಾಸಿಕ ಜಯ ಗಳಿಸಿದೆ. ಭಾರತ ಮೊದಲ ಬಾರಿಗೆ Centurion ನಲ್ಲಿ ವಿಜಯೋತ್ಸವ ಆಚರಿಸುವ ಮೂಲಕ ಮೂರು ಟೆಸ್ಟ್‌ಗಳ ಸರಣಿಯಲ್ಲಿ 1–0 ಅಂಕಗಳಿಂದ ಮುನ್ನಡೆ ಗಳಿಸಿದೆ.
ಮೊದಲ ಇನಿಂಗ್ಸ್‌ನಲ್ಲಿ KL Rahul ಶತಕದ ನೆರವಿನಿಂದ ಭಾರತ ತಂಡವು ಗಳಿಸಿದ್ದ 327 ರನ್‌ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ 197 ರನ್ ಗಳಿಸಿತ್ತು. 130 ರನ್‌ಗಳ ಮುನ್ನಡೆಗಳಿಸಿದ್ದ Virat Kohli ಬಳಗವು ಎರಡನೇ ಇನಿಂಗ್ಸ್‌ನಲ್ಲಿ 174 ರನ್ ಗಳಿಸಿತ್ತು. 305 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ತಂಡವು ಬುಧವಾರ 4 ನೇ ದಿನದಾಟದ ಮುಕ್ತಾಯಕ್ಕೆ 40.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 94 ರನ್ ಗಳಿಸಿತ್ತು. ಕೊನೆಯ ದಿನದಾಟದಲ್ಲಿ ಆತಿಥೇಯ ತಂಡವು 191 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡಿತು.
ಸೆಂಚುರಿಯನ್ ಪಂದ್ಯದಲ್ಲಿ ಭಾರತದ ವೇಗಿಗಳು ಒಟ್ಟು 18 ವಿಕೆಟ್‌ಗಳನ್ನು ಕಬಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ಕೆ.ಎಲ್. ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ (Man of the Match) ಭಾಜನರಾದ್ದರು.