Antigua : Yash Dhull ನೇತೃತ್ವದ ಭರತ Under-19 ಕ್ರಿಕೆಟ್ ತಂಡ ಶನಿವಾರ Antigua ದ North Sound ನ Sir Vivian Richards Stadium ನಲ್ಲಿ England ವಿರುದ್ಧ ನಡೆದ ವಿಶ್ವಕಪ್ (U-19 Cricket World Cup) ಫೈನಲ್ ಪಂದ್ಯದಲ್ಲಿ 4 ವಿಕೆಟ್ ಗಳ ಭರ್ಜರಿ ಜಯಗಳಿಸಿತು.
ಟಾಸ್ ಗೆದ್ದು ಇಂಗ್ಲೆಂಡ್ Captain Tom Prest ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಭಾರತದ ಮಧ್ಯಮ ವೇಗಿ Raj Bawa ರ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಬ್ಯಾಟ್ಸಮನ್ ಗಳು James Rew ರ 95 ರನ್ ನೆರವಿನೊಂದಿಗೆ 189 ರನ್ ಗಳಿಗೆ ಆಲೌಟ್ಆಯಿತು. ಭಾರತದ ಪರ Raj Bawa5, Ravi Kumar 4 ಮತ್ತು Kaushal Tambe 1 ವಿಕೆಟ್ ಪಡೆದರು.
190 ರನ್ ಗಳ ಸಾಧಾರಣ ಗುರಿ ಬೆನ್ನಟ್ಟಿದ Team India ಗೆ Joshua Boyden ಪಂದ್ಯದ ಎರಡನೇ ಎಸತದಲ್ಲಿ Angkrish Raghuvanshi ರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದರು. ನಂತರ Harnoor Singh (21), Shaik Rasheed (50), Nishant Sindhu (50) ಮತ್ತು Raj Bawa (35) ರ ಸಂಯೋಜಿತ ಆಟದ ನೆರವಿನಿಂದ ಭಾರತ 5 ನೇ ಭಾರಿ ICC Under 19 World Cup ಪಟ್ಟ ಅಲಂಕರಿಸಿತು. ಆಲ್ರೌಂಡ್ ಆಟ ಪ್ರದರ್ಶಿಸಿದ Raj Bawa ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ತಲಾ ₹ 40 ಲಕ್ಷ ನಗದು ಬಹುಮಾನ ನೀಡಲು BCCI ನಿರ್ಧರಿಸಿದ್ದು ನೆರವು ಸಿಬ್ಬಂದಿಗೆ ₹ 25 ಲಕ್ಷ ನೀಡುವುದಾಗಿ ಘೋಷಿಸಿದೆ. ಅಹಮದಾಬಾದಿನಲ್ಲಿ ಎಲ್ಲ ಆಟಗಾರರನ್ನು ಸನ್ಮಾನಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.