ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ವೇಳಾಪಟ್ಟಿ ಪ್ರಕಟವಾಗಿದೆ. ಮಾರ್ಚ್ 22ರಿಂದ ಪ್ರಾರಂಭವಾಗುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ (KKR) ಕಣಕ್ಕಿಳಿಯಲಿದೆ. ಫೈನಲ್ ಪಂದ್ಯ ಮೇ 25 ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ.
ಈ ಬಾರಿಯ ಟೂರ್ನಿಗೆ 10 ತಂಡಗಳನ್ನು ತಲಾ 5 ತಂಡಗಳಂತೆ ಎರಡು ಗ್ರೂಪ್ ಗಳಿಗೆ ವಿಂಗಡಿಸಲಾಗಿದೆ. ಪ್ರತಿ ತಂಡವು
- ತನ್ನದೇ ಗ್ರೂಪ್ ನಲ್ಲಿರುವ 4 ತಂಡಗಳ ವಿರುದ್ಧ 2 ಪಂದ್ಯಗಳನ್ನು ಆಡಲಿದೆ.
- ಇನ್ನೊಂದು ಗ್ರೂಪ್ ನಲ್ಲಿರುವ 4 ತಂಡಗಳ ವಿರುದ್ಧ ಒಂದೊಂದು ಪಂದ್ಯ ಆಡಲಿದೆ.
- ಉಳಿದ ಒಂದು ತಂಡದ ವಿರುದ್ಧ 2 ಪಂದ್ಯಗಳನ್ನು ಆಡಲಿದೆ.
ಹೀಗಾಗಿ RCB ಸೇರಿದಂತೆ ಎಲ್ಲಾ ತಂಡಗಳು 4 ತಂಡಗಳ ವಿರುದ್ಧ ಒಂದೊಂದು ಮಾತ್ರ ಪಂದ್ಯ ಆಡಲಿವೆ. RCB ಯ ಈ 4 ಏಕೈಕ ಪಂದ್ಯಗಳ ವಿವರ ಹೀಗಿದೆ.
RCB ಏಕೈಕ ಪಂದ್ಯವಾಡಲಿರುವ 4 ತಂಡಗಳು
- RCB vs GT (ಗುಜರಾತ್ ಟೈಟನ್ಸ್)
- ದಿನಾಂಕ: ಏಪ್ರಿಲ್ 2
- ಸ್ಥಳ: ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
- ಗುಜರಾತ್ ಟೈಟನ್ಸ್ ವಿರುದ್ಧ RCB ಈ ಬಾರಿಯ ಲೀಗ್ ಹಂತದಲ್ಲಿ ಒಂದೇ ಪಂದ್ಯವಾಡಲಿದೆ.
- RCB vs MI (ಮುಂಬೈ ಇಂಡಿಯನ್ಸ್)
- ದಿನಾಂಕ: ಏಪ್ರಿಲ್ 7
- ಸ್ಥಳ: ವಾಂಖೆಡೆ ಸ್ಟೇಡಿಯಂ, ಮುಂಬೈ
- ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ RCB ಕೇವಲ ಒಂದು ಪಂದ್ಯವಾಡಲಿದೆ.
- RCB vs LSG (ಲಕ್ನೋ ಸೂಪರ್ ಜೈಂಟ್ಸ್)
- ದಿನಾಂಕ: ಮೇ 9
- ಸ್ಥಳ: ಲಕ್ನೋ
- ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ RCB ಏಕೈಕ ಪಂದ್ಯವಾಡಲಿದೆ.
- RCB vs SRH (ಸನ್‌ರೈಸರ್ಸ್ ಹೈದರಾಬಾದ್)
- ದಿನಾಂಕ: ಮೇ 13
- ಸ್ಥಳ: ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
- RCB vs SRH ಪಂದ್ಯದ ವೇಳೆ ರನ್ ಮಳೆಯ ನಿರೀಕ್ಷೆ ಇದೆ.
ಇತರ ಪಂದ್ಯಗಳು
RCB ಇನ್ನುಳಿದ 5 ತಂಡಗಳ (CSK, KKR, RR, PBKS, DC) ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ. ಈ ಮೂಲಕ RCB ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ.