
ಇಸ್ರೇಲ್ ಗಾಜಾ, ಲೆಬನಾನ್ ಮತ್ತು ಸಿರಿಯಾದಲ್ಲಿ (Gaza, Lebanon and Syria) ವಾಯುದಾಳಿ (Israeli airstrikes) ನಡೆಸಿದ್ದು, ಒಂದು ಮಗು ಸೇರಿದಂತೆ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲಿ ಸೇನೆಯ ಪ್ರಕಾರ, ಭಯೋತ್ಪಾದಕರ ಸಂಚು ತಡೆಗಟ್ಟಲು ಈ ದಾಳಿ ನಡೆಸಲಾಗಿದೆ.
ಇಸ್ರೇಲ್ ಕಳೆದ ಎರಡು ವಾರಗಳಿಂದ ಗಾಜಾಗೆ ಆಹಾರ, ಔಷಧಿ, ಇಂಧನ ಮತ್ತು ಇತರ ಸರಬರಾಜುಗಳನ್ನು ನಿರ್ಬಂಧಿಸಿದೆ. ಹಮಾಸ್ ಒಪ್ಪಂದದ ಬದಲಾವಣೆಗಳಿಗೆ ಸಹಮತಿಯಾಗಬೇಕೆಂದು ಒತ್ತಾಯಿಸಲಾಗಿದೆ.
ಡಿಸೆಂಬರ್ ನಲ್ಲಿ ಸರ್ವಾಧಿಕಾರಿ ಬಶರ್ ಅಸ್ಸಾದ್ ಸಾವಿನ ನಂತರ, ಇಸ್ರೇಲ್ ದಕ್ಷಿಣ ಸಿರಿಯಾದ ಭೂಪ್ರದೇಶವನ್ನು ವಶಪಡಿಸಿಕೊಂಡಿತು. ದರಾರಾ ನಗರದಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಮಕ್ಕಳು, ಒಬ್ಬ ಮಹಿಳೆ ಹಾಗೂ ಮೂವರು ನಾಗರಿಕ ರಕ್ಷಣಾ ಸ್ವಯಂಸೇವಕರು ಸಾವನ್ನಪ್ಪಿದ್ದಾರೆ. 19 ಮಂದಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ ಎರಡು ಆಂಬ್ಯುಲೆನ್ಸ್ಗಳು ಹಾನಿಗೊಂಡಿವೆ.
ಮಧ್ಯ ಗಾಜಾದ ಬುರೈಜ್ ನಿರಾಶ್ರಿತ ಶಿಬಿರದ ಸುತ್ತ ಎರಡು ದಾಳಿಗಳು ನಡೆದಿವೆ. ಡೆರ್ ಅಲ್-ಬಲಾಹ್ ನಲ್ಲಿ ಮೂರು ಮನೆಗಳು ಹಾನಿಗೊಂಡಿವೆ. ಗಾಜಾ ನಗರ, ಖಾನ್ ಯೂನಸ್ ಹಾಗೂ ರಫಾದ ಕೆಲವು ಪ್ರದೇಶಗಳೂ ಗುರಿಯಾಗಿವೆ.
ಶನಿವಾರ, ಉತ್ತರ ಗಾಜಾದ ಬೀಟ್ ಲಾಹಿಯಾದಲ್ಲಿ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಜನರ ಗುಂಪು ಮತ್ತು ವಾಹನದ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ.