Bengaluru : ಸರ್ಕಾರದ ವತಿಯಿಂದ ಬಲಿಜ ಸಮುದಾಯದ ಕುಲಗುರು ಯೋಗಿ ನಾರೇಯಣ(Kaiwara Sri Yogi Nareyana) ಯತೀಂದ್ರ (ಕೈವಾರ ತಾತಯ್ಯ) ಅವರ ಜಯಂತಿಯನ್ನು (Jayanti) ಆಚರಿಸಬೇಕು ಎಂದು ಸಂಸದ ಪಿ.ಸಿ.ಮೋಹನ್ (P. C. Mohan) ನೇತೃತ್ವದಲ್ಲಿ ಕರ್ನಾಟಕ ಬಲಿಜ ಮಹಾಸಭಾ ಶುಕ್ರವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಾತ್ವಿಕ ಸಮ್ಮತಿ ಸೂಚಿಸಿದ್ದಾರೆ ಎಂದು ಮಹಾಸಭಾ ತಿಳಿಸಿದೆ.
ರಾಜ್ಯದಲ್ಲಿ 62 ಉಪ ಜಾತಿಗಳನ್ನು ಒಳಗೊಂಡಿರುವ ಬಲಿಜ ಸಮುದಾಯದಲ್ಲಿ 40 ಲಕ್ಷ ಜನರಿದ್ದು ಸಮುದಾಯಕ್ಕಾಗಿ ಗುರುಪೀಠ ಸ್ಥಾಪಿಸಬೇಕು. ಸಮುದಾಯದ ಜನ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಲು ಬಲಿಜ ಜನಾಂಗಕ್ಕೆ ಪ್ರವರ್ಗ–2 (A) ಮೀಸಲಾತಿ ನೀಡಬೇಕು ಹಾಗೂ ಬಲಿಜ ಜನಾಂಗದ ಅಭಿವೃದ್ಧಿಗೆ ಈ ಬಜೆಟ್‌ನಲ್ಲಿ ನಿಗಮ ರಚಿಸಿ ಅನುದಾನ ಘೋಷಿಸಬೇಕು. ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಮುಖಂಡರಾದ ಮನೋಹರ್, ಪಿ.ಎಸ್.ಪ್ರಕಾಶ್, ಪುಟ್ಟಸಿದ್ಧ ಶೆಟ್ಟಿ, ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.