Kanakapura, Ramanagara : ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹೊಸದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣಕಡಬೂರು, ಸಾಲಬನ್ನಿ, ಬಾಳೆಪುರ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ (Anganwadi Building Construction) ಶುಕ್ರವಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಬಸಪ್ಪ ಭೂಮಿಪೂಜೆ ಮಾಡಿದರು.
ಈ ಮೂರು ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡಗಳು ಶಿಥಿಲಗೊಂಡಿದ್ದು ಹಳೇ ಕಟ್ಟಡವನ್ನು ತೆರವುಗೊಳಿಸಲಾಗಿತ್ತು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ನರೇಗಾ ಹಣದಿಂದ ಅಂಗನವಾಡಿ ನಿರ್ಮಾಣ ಮಾಡಲಾಗುತ್ತಿದೆ. ಅಣಕಡಬೂರು ಮತ್ತು ಸಾಲಬನ್ನಿ ಗ್ರಾಮದಲ್ಲಿ ತಲಾ ₹10 ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು ಬಾಳೆಪುರ ಗ್ರಾಮದಲ್ಲಿ ₹21 ಲಕ್ಷದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು PDO ಎನ್.ಎಸ್.ರಘು ತಿಳಿಸಿದರು.
ಹೊಸದುರ್ಗ ಗ್ರಾ. ಪಂ ಅಧ್ಯಕ್ಷೆ ಸವಿತ ಕೆ. ಕುಮಾರ್, ಸಾಲಬನ್ನಿ ರಾಜೇಂದ್ರ, ಅಣಕಡಬೂರು ಮಧು, ಕೆಂಪಮ್ಮ ಮುನಿಮಾರಯ್ಯ, ಬಾಳೆಪುರ ರಮೇಶ್, ಮಾದಪ್ಪ, ವಲಸಿ ಪುಟ್ಟಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.