Bengaluru : 2021ನೇ ಸಾಲಿನ ಜಾನಪದ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಕರ್ನಾಟಕ ಜಾನಪದ ಅಕಾಡೆಮಿ (Karnataka Janapada Academy) ಪ್ರಕಟಿಸಿದೆ.
ಬೆಂಗಳೂರಿನ ಕನ್ನಡ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ (Matha B. Manjamma Jogati) ಅವರು ಪ್ರಶಸ್ತಿ ಪಡೆದ ಕಲಾವಿದರ ಹೆಸರುಗಳನ್ನು ಪ್ರಕಟಿಸಿದರು.
2021ನೇ ಸಾಲಿನಲ್ಲಿ ಒಟ್ಟು 30 ಜಾನಪದ ಕಲಾವಿದರನ್ನು “ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಇಬ್ಬರು ಜಾನಪದ ತಜ್ಞರಿಗೆ ‘ಜಾನಪದ ತಜ್ಞ’ ಪ್ರಶಸ್ತಿ ಯನ್ನು ನೀಡಲಾಗಿದೆ.
‘ಗೌರವ ಪ್ರಶಸ್ತಿ’ ಪುರಸ್ಕೃತರಿಗೆ ₹ 25,000 ಹಾಗೂ ‘ಜಾನಪದ ತಜ್ಞ’ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹ 50,000 ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.
ಜಾನಪದ ಅಕಾಡೆಮಿ ಪ್ರಶಸ್ತಿ
- ಗಂಗಮ್ಮ, ಸೋಬಾನೆ ಪದ , ಬೆಂಗಳೂರು ನಗರ ಜಿಲ್ಲೆ.
- ತಿಮ್ಮಯ್ಯ, ಜಾನಪದ ಕಥೆಗಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
- ಚಿಕ್ಕಮ್ಮ, ಸೋಬಾನೆ ಪದ, ರಾಮನಗರ ಜಿಲ್ಲೆ.
- ಕಡಬ ಶ್ರೀನಿವಾಸ, ಜಾನಪದ ಹಾಸ್ಯ ಜಾದೂಗಾರ, ತುಮಕೂರು ಜಿಲ್ಲೆ.
- ಗ.ನ. ಅಶ್ವತ್ಥ, ಜಾನಪದ ಗಾಯಕ, ಚಿಕ್ಕಬಳ್ಳಾಪುರ ಜಿಲ್ಲೆ.
- ನಾರಾಯಣಸ್ವಾಮಿ, ತತ್ವಪದ, ಕೋಲಾರ ಜಿಲ್ಲೆ.
- ಲಕ್ಷ್ಮೀ ರಾಮಪ್ಪ, ಹಸೆ ಚಿತ್ತಾರ, ಶಿವಮೊಗ್ಗ ಜಿಲ್ಲೆ.
- ಚಂದ್ರಮ್ಮ, ಮದುವೆ ಹಾಡು, ಚಿತ್ರದುರ್ಗ ಜಿಲ್ಲೆ.
- ರಂಗಮ್ಮ ಗಂಡ ಗಿಡ್ಡಪ್ಪ, ಜಾನಪದ ಗಾಯಕಿ, ದಾವಣಗೆರೆ ಜಿಲ್ಲೆ.
- ಮಹಾದೇವಸ್ವಾಮಿ, ನೀಲಗಾರರ ಪದ, ಮಂಡ್ಯ ಜಿಲ್ಲೆ.
- ಮಹಾದೇವು, ಬೀಸು ಕಂಸಾಳೆ, ಮೈಸೂರು ಜಿಲ್ಲೆ.
- ಎಚ್.ಎನ್. ರಾಮಯ್ಯ, ಕೀಲುಕುದುರೆ, ಹಾಸನ ಜಿಲ್ಲೆ.
- ವೆಂಕಟೇಶ ಬಂಗೇರ, ಕರಗ ನೃತ್ಯ, ದಕ್ಷಿಣ ಕನ್ನಡ ಜಿಲ್ಲೆ.
- ಆರ್.ಎಂ. ಶಿವಮಲ್ಲೇಗೌಡ, ಗೊರವರ ಕುಣಿತ, ಚಾಮರಾಜನಗರ ಜಿಲ್ಲೆ.
- ಹನುಮಕ್ಕ (ದೃಷ್ಟಿ ವಿಶೇಷ ಚೇತನ), ತತ್ವಪದ, ಚಿಕ್ಕಮಗಳೂರು ಜಿಲ್ಲೆ.
- ಜೆ.ಕೆ. ಮರಿ, ಜೇನು ಕುರುಬರ ನೃತ್ಯ ಮತ್ತು ಹಾಡು, ಕೊಡಗು ಜಿಲ್ಲೆ.
- ಪದ್ಮಾವತಿ ಆಚಾರ್ಯ, ನಾಟಿ ವೈದ್ಯೆ, ಉಡುಪಿ ಜಿಲ್ಲೆ.
- ಕುಬೇರಗೌಡ ಮುರಳ್ಳಿ, ಜಗ್ಗಲಿಗೆ, ಧಾರವಾಡ ಜಿಲ್ಲೆ.
- ರಾಮಚಂದ್ರಪ್ಪ ಸಿದ್ದಪ್ಪ ನವಲಗುಂದ, ಕರಡಿ ಮಜಲು, ಗದಗ ಜಿಲ್ಲೆ.
- ನಾಗಲಿಂಗಪ್ಪ ಸಿದ್ರಾಮಪ್ಪ ಕಂಬಾರ, ಭಜನೆ, ವಿಜಯಪುರ ಜಿಲ್ಲೆ.
- ರಂಗಪ್ಪ ಬಾಲಪ್ಪ ಹಲಕುರ್ಕಿ, ಶಿವಭಜನೆ, ಬಾಗಲಕೋಟೆ ಜಿಲ್ಲೆ.
- ಸಿದ್ದಲಿಂಗಪ್ಪ ಚನ್ನಬಸಪ್ಪ ನರೇಗಲ್ಲ, ತತ್ವಪದ, ಹಾವೇರಿ ಜಿಲ್ಲೆ.
- ರುದ್ರಾಂಬಿಕಾ ಮಹಾಂತೇಶ ಯಾಳಗಿ, ಲಾವಣಿಪದ, ಬೆಳಗಾವಿ ಜಿಲ್ಲೆ.
- ಭೂಗೂ ಧಾಕೂ ಕೊಳಾಪ್ಪೆ, ಹೋಳಿ ಸಿಗ್ಮಾ ಕುಣಿತ, ಉತ್ತರಕನ್ನಡ ಜಿಲ್ಲೆ.
- ಪೆದ್ದ ಮಾರೆಕ್ಕ, ಬುರ್ರ ಕಥಾ, ಬಳ್ಳಾರಿ ಜಿಲ್ಲೆ.
- ಮರಿಯಪ್ಪ, ಭಜನೆ ಪದ, ರಾಯಚೂರು ಜಿಲ್ಲೆ, ಶಿವಲಿಂಗಪ್ಪ, ಹಗಲುವೇಷ, ಕೊಪ್ಪಳ ಜಿಲ್ಲೆ.
- ಶಿವಲಿಂಗಪ್ಪ, ಹಗಲು ವೇಷ, ಕೊಪ್ಪಳ ಜಿಲ್ಲೆ
- ಶಕುಂತಲಾ ದೇವಲಾನಾಯಕ, ಗೀಗೀಪದ, ಕಲುಬುರಗಿ ಜಿಲ್ಲೆ.
- ಸಿದ್ರಾಮ, ಗೋಂದಳಿ ಪದ, ಬೀದರ್ ಜಿಲ್ಲೆ.
- ಭೂಮ್ಮಣ್ಣ ಬಸಪ್ಪ ಲಾಠಿ, ಡೊಳ್ಳು ಕುಣಿತ, ಯಾದಗಿರಿ ಜಿಲ್ಲೆ.
ಜಾನಪದ ತಜ್ಞ ಪ್ರಶಸ್ತಿ
- ಡಾ. ಚಂದ್ರು ಕಾಳೇನಹಳ್ಳಿ, ಡಾ.ಜಿ.ಶಂ.ಪ ಪ್ರಶಸ್ತಿ, ಹಾಸನ ಜಿಲ್ಲೆ
- ಡಾ. ಶ್ರೀಪಾದ ಶೆಟ್ಟಿ, ಡಾ.ಬಿ.ಎಸ್. ಗದ್ದಿಗಿಮಠ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲೆ.
For Daily Updates WhatsApp ‘HI’ to 7406303366
Image: ಕರ್ನಾಟಕ ಜಾನಪದ ಅಕಾಡೆಮಿ
[…] […]