Bengaluru (Bangalore) : ವೃತ್ತಿಪರ ಕೋರ್ಸುಗಳಿಗೆ July 16 ರಿಂದ July 18, 2022 ರ ವರೆಗೆ ನಡೆದಿದ್ದ KCET ಪರೀಕ್ಷೆಯ (Common Entrance Test – CET) ಫಲಿತಾಂಶ July 30 ಪ್ರಕಟವಾಗಲಿದ್ದು ಫಲಿತಾಂಶವನ್ನು(Result) KEA ನ ಅಧಿಕೃತ Website (https://cetonline.karnataka.gov.in/kea/ ) ನಲ್ಲಿ ವಿದ್ಯಾರ್ಥಿಗಳು ಪಡೆಯಬಹುದು ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ (C. N. Ashwath Narayan) ಮಾಹಿತಿ ನೀಡಿದ್ದಾರೆ.
CET ಬರೆದಿದ್ದ CBSE, ICSE ವಿದ್ಯಾರ್ಥಿಗಳು KEA ವೆಬ್‌ಸೈಟ್ ನಲ್ಲಿ ತಮ್ಮ ಅಂಕಗಳನ್ನು July 26 ರೊಳಗೆ ಅಪ್ಲೋಡ್ ಮಾಡಲು ಸೂಚಿಸಲಾಗಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ ಟ್ವೀಟ್ (Tweet) ಮಾಡಿದ್ದಾರೆ.