
Thiruvananthapuram: ಜೋರ್ಡಾನ್ (Jordanian) ಗಡಿಯ ಮೂಲಕ ಇಸ್ರೇಲ್ (Israel)ನುಸುಳಲು ಯತ್ನಿಸಿದ್ದ ಕೇರಳದ (Kerala) ಥುಂಬಾ ಮೂಲದ ಥಾಮಸ್ ಗೇಬ್ರಿಯಲ್ ಪೆರೇರಾ ಎಂಬುವರನ್ನು ಜೋರ್ಡಾನ್ ಸೇನೆ ಗುಂಡಿಕ್ಕಿ ಹತ್ಯೆ ಮಾಡಿದೆ. ಪ್ರವಾಸಿ ವೀಸಾದೊಂದಿಗೆ ಜೋರ್ಡಾನಿಗೆ ತೆರಳಿದ್ದ ಅವರು, ಅಕ್ರಮವಾಗಿ ಇಸ್ರೇಲ್ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಭಾರತೀಯ ರಾಯಭಾರ ಕಚೇರಿ ಅವರ ಸಾವನ್ನು ದೃಢಪಡಿಸಿದೆ. 44 ವರ್ಷದ ಥಾಮಸ್ ತಮ್ಮ ಸಂಬಂಧಿ ಎಡಿಸನ್ ಜೊತೆ ಫೆಬ್ರವರಿ 5ರಂದು ಇಸ್ರೇಲ್ ಕಡೆ ಪ್ರಯಾಣ ಬೆಳೆಸಿದ್ದರು. ಫೆ.9ರವರೆಗೆ ಪತ್ನಿ ಕ್ರಿಸ್ಟಿನಾ ಅವರೊಂದಿಗೆ ಸಂಪರ್ಕದಲ್ಲಿದ್ದ ಅವರು, ತಾನು ಸುರಕ್ಷಿತನಾಗಿದ್ದೇನೆ ಎಂದು ತಿಳಿಸಿದ್ದರು. ಆದರೆ ನಂತರ ಸಂಪರ್ಕ ಕಡಿದುಕೊಳ್ಳುತ್ತಿದ್ದಂತೆ ಆತಂಕಗೊಂಡ ಪತ್ನಿ, ಅನಿವಾಸಿ ಕೇರಳೀಯರ ವ್ಯವಹಾರಗಳ ಇಲಾಖೆಗೆ ಸಹಾಯ ಕೇಳಿದರು. ಫೆ.10ರಂದು ಅವರು ಹತ್ಯೆಯಾಗಿರುವುದು ಬಹಿರಂಗಗೊಂಡಿದೆ.
ಈ ಘಟನೆಯಲ್ಲಿ ಮೇಣಂಕುಲಂ ನಿವಾಸಿಯಾದ ಥಾಮಸ್ ಅವರ ಸಂಬಂಧಿ ಎಡಿಸನ್ ಗಾಯಗೊಂಡಿದ್ದಾರೆ.