![Benjamin Netanyahu Benjamin Netanyahu](https://kannadatopnews.com/wp-content/uploads/2025/02/Photoshop_Online-news-copy-113.jpg)
New Delhi: ಸೌದಿ ಅರೇಬಿಯಾದ (Saudi Arabia) ಶುರಾ ಕೌನ್ಸಿಲ್ ಸದಸ್ಯ ಯೂಸುಫ್ ಬಿನ್ ಟ್ರಾಡ್ ಅಲ್-ಸದೌನ್, ಇಸ್ರೇಲ್ ಪ್ರಧಾನಿಗೆ ಬೆಂಜಮಿನ್ ನೆತನ್ಯಾಹು (Benjamin Netanyahu)ನೀಡಿದ ಹೇಳಿಕೆಯನ್ನು ವಿರೋಧಿಸಿ ಸೌದಿ ನೆಲದಲ್ಲಿ ಪ್ಯಾಲೆಸ್ಟೀನಿಯನ್ ರಾಷ್ಟ್ರ ಸ್ಥಾಪಿಸುವ ವಿಚಾರವನ್ನು ಖಂಡಿಸಿದ್ದಾರೆ.
ಸೌದಿ ಪತ್ರಿಕೆ ಓಕಾಜ್ ನಲ್ಲಿ ಪ್ರಕಟವಾದ ಲೇಖನದಲ್ಲಿ, ಅವರು ನೆತನ್ಯಾಹು ಅವರ ಹೇಳಿಕೆಯನ್ನು ವ್ಯಂಗ್ಯವಾಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಲಾಸ್ಕಾ ಅಥವಾ ಗ್ರೀನ್ಲ್ಯಾಂಡ್ ನಲ್ಲಿ ಇಸ್ರೇಲಿಗಳನ್ನು ನೆಲೆಸುವಂತೆ ಸಲಹೆ ನೀಡಬೇಕು ಎಂದು ಹೇಳಿದರು.
ಇತ್ತೀಚೆಗೆ ಇಸ್ರೇಲ್ ನ ಚಾನೆಲ್ 14ಗೆ ನೀಡಿದ ಸಂದರ್ಶನದಲ್ಲಿ, ನೆತನ್ಯಾಹು ಅವರು ಸೌದಿ ಅರೇಬಿಯಾ ತನ್ನ ನೆಲದಲ್ಲಿ ಪ್ಯಾಲೆಸ್ಟೀನಿಯನ್ ರಾಷ್ಟ್ರವನ್ನು ಸ್ಥಾಪಿಸಬಹುದು ಎಂದು ಹೇಳಿದ್ದರು. ಈ ವಿಚಾರದ ಬಗ್ಗೆ ರಿಯಾದ್ ಸ್ಪಷ್ಟಪಡಿಸಿದ ಸಮಯದಲ್ಲಿ, ಇಸ್ರೇಲ್ ಜೊತೆಗಿನ ಸಂಬಂಧಗಳು ಸಾಮಾನ್ಯ ಸ್ಥಿತಿಗೆ ಬರುವುದಾಗಿ ಹೇಳಿದ್ದರು.