
ಭಾರತದ Startup ಜಗತ್ತಿಗೆ LAT Aerospace ಎಂಬ ಹೊಸ ಹೆಸರು ಸೇರ್ಪಡೆಗೊಂಡಿದೆ. Zomatoದ ಮಾಜಿ ಮುಖ್ಯ ಕಾರ್ಯಾಚರಣಾ ಅಧಿಕಾರಿ (COO) ಸುರಭಿ ದಾಸ್ ಅವರು ಈ Startup ಅನ್ನು ಸ್ಥಾಪಿಸಿದ್ದಾರೆ. ವಿಶೇಷವೆಂದರೆ, ಜೊಮ್ಯಾಟೊದ ಸಿಇಒ ದೀಪಿಂದರ್ ಗೋಯಲ್ ಕೂಡ ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ ಮತ್ತು ಕಾರ್ಯನಿರ್ವಾಹಕೇತರ ಸಹ-ಸಂಸ್ಥಾಪಕರಾಗಿ ಕೈಜೋಡಿಸಿದ್ದಾರೆ.
ಈ Startup ಕಡಿಮೆ ವೆಚ್ಚದ ಶಾರ್ಟ್ ಟೇಕ್ಆಫ್ ಮತ್ತು ಲ್ಯಾಂಡಿಂಗ್ (STOL) ವಿಮಾನಗಳನ್ನು ನಿರ್ಮಿಸಲು ಯೋಜಿಸಿದೆ. ಇದು ಭಾರತದಲ್ಲಿ ಪ್ರಾದೇಶಿಕ ವಿಮಾನಯಾನವನ್ನು ಸುಗಮಗೊಳಿಸುವುದಕ್ಕೆ ಸಹಾಯ ಮಾಡುತ್ತದೆ. 1,500 ಕಿಮೀ ವ್ಯಾಪ್ತಿಯ 24 ಆಸನಗಳ ವಿಮಾನಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಇದಾಗಿದೆ.
ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ದೀಪಿಂದರ್ ಗೋಯೆಲ್ ಈ Startupನ ಲ್ಲಿ 20 ಮಿಲಿಯನ್ ಡಾಲರ್ (ಸುಮಾರು 174 ಕೋಟಿ ರೂ.) ಹೂಡಿಕೆ ಮಾಡಿದ್ದಾರೆ. ಆದರೆ ಅವರ ಪಾತ್ರ ಕಾರ್ಯನಿರ್ವಾಹಕೇತರವಾಗಿದ್ದು, ಅವರು ಕೇವಲ ಹೂಡಿಕೆದಾರ ಮತ್ತು ಸಲಹೆಗಾರರಾಗಿ ಮಾತ್ರ ಕಾರ್ಯನಿರ್ವಹಿಸುತ್ತಾರೆ.
LAT ಏರೋಸ್ಪೇಸ್ ತನ್ನ ಪ್ರಾರಂಭಿಕ ಹಂತದಲ್ಲಿ 50 ಮಿಲಿಯನ್ ಡಾಲರ್ (ಸುಮಾರು 436 ಕೋಟಿ ರೂ.) ಸಂಗ್ರಹಿಸಲು ಪ್ರಯತ್ನಿಸುತ್ತಿದೆ. ಕಂಪನಿಯು ಏರೋಡೈನಾಮಿಕ್ಸ್, ಮೆಟೀರಿಯಲ್ ಸೈನ್ಸ್ ಮತ್ತು ಹೈಬ್ರಿಡ್ ಪ್ರೊಪಲ್ಷನ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ ಇಂಜಿನಿಯರ್ ಗಳನ್ನು ನೇಮಿಸಿಕೊಳ್ಳುತ್ತಿದೆ.
ಸುರಭಿ ದಾಸ್ ಅವರು ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ಮಾಡಿದ ನಂತರ ತಮ್ಮ ವೃತ್ತಿ ಜೀವನವನ್ನು ಬೈನ್ & ಕಂಪನಿಯಲ್ಲಿ ಪ್ರಾರಂಭಿಸಿದರು. ನಂತರ ಅವರು ಜೊಮ್ಯಾಟೊಗೆ ಸೇರಿ 12 ವರ್ಷಗಳ ಕಾಲ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಜೊಮ್ಯಾಟೋದಲ್ಲಿ COO, CEO ಮುಖ್ಯಸ್ಥ ಮತ್ತು ಬ್ಲಿಂಕಿಟ್‌ನ ಪ್ರಮುಖ ಪಾತ್ರಗಳಲ್ಲಿ ಕಾರ್ಯನಿರ್ವಹಿಸಿದರು.
ಇತರ ಏರ್ ಟ್ಯಾಕ್ಸಿ ಮಾದರಿಗಳನ್ನು ಅನುಸರಿಸುವ ಬದಲು, LAT ಏರೋಸ್ಪೇಸ್ ಕಡಿಮೆ ವೆಚ್ಚದಲ್ಲಿ ಚಿಕ್ಕ ರನ್‌ವೇಗಳಲ್ಲಿ ಹಾರಲು ಸಾಧ್ಯವಾಗುವ STOL ವಿಮಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಭಾರತದ ಸಣ್ಣ ನಗರಗಳು ಮತ್ತು ಹಳ್ಳಿಗಳನ್ನು ವಿಮಾನ ಸಂಪರ್ಕದಲ್ಲಿ ಸೇರಿಸುವ ಉದ್ದೇಶವನ್ನು ಹೊಂದಿದೆ.
LAT ಏರೋಸ್ಪೇಸ್ ಯಶಸ್ವಿಯಾದರೆ, ಭಾರತದಲ್ಲಿ ವಿಮಾನ ಪ್ರಯಾಣ ಸುಲಭವಾಗಬಹುದು. ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಗೆ ವಿಮಾನ ಸಂಪರ್ಕ ಹೆಚ್ಚಿಸಲು ಇದು ಸಹಾಯ ಮಾಡಬಹುದು. ಈ Startup ಯಶಸ್ಸು ಭಾರತೀಯ ಏರೋಸ್ಪೇಸ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತರಬಹುದು.