Magadi, Ramanagara : ಮಾಗಡಿ ತಾಲ್ಲೂಕಿನ ಮೋಟೇಗೌಡನಪಾಳ್ಯದ ಬೆಟ್ಟದ ಮಹದೇಶ್ವರಸ್ವಾಮಿ ರಥೋತ್ಸವ (Mahadeshwara Swamy Rathotsava) ಮತ್ತು ಅಗ್ನಿಕುಂಡ ಕಾರ್ಯಕ್ರಮ ಮಹದೇಶ್ವರಸ್ವಾಮಿ ದೇವರ ಸೇವಾ ಟ್ರಸ್ಟಿನ ವತಿಯಿಂದ ಸೋಮವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವಕ್ಕೆ ತ್ರಿಪುರಾಂತಕೇಶ್ವರ ಮಠಾಧೀಶ ಸದಾಶಿವ ಶಿವಾಚಾರ್ಯ ಸ್ವಾಮಿಜಿ ಚಾಲನೆ ನೀಡಿದರು.
ಮೋಟೇಗೌಡನ ಪಾಳ್ಯ, ಕುರುಪಾಳ್ಯ, ಹನುಮಾಪುರ, ವಿಠಲಾಪುರ, ಚನ್ನಮ್ಮನಪಾಳ್ಯ, ಚಂದೂರಾಯನಹಳ್ಳಿ, ಹೂಜುಗಲ್, ಮಾಯನಾಯಕನಹಳ್ಳಿ, ತಗ್ಗಿಕುಪ್ಪೆ, ಸುತ್ತಲಿನ ಹಳ್ಳಿಗಳಿಂದ ಮಹಿಳೆಯರು ಹೂವು ಹೊಂಬಾಳೆ ಆರತಿ ಬೆಳಗಿದರು.
ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ, ಜಿ.ಪಂ ಮಾಜಿ ಸದಸ್ಯ ಎಚ್.ಎನ್. ಅಶೋಕ್, JDS ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ, ಹನುಮಾಪುರದ ಚಿಕ್ಕಣ್ಣ, ಟ್ರಸ್ಟಿನ ಅಧ್ಯಕ್ಷ ಆರ್. ರಂಗಸ್ವಾಮಿ, ಉಪಾಧ್ಯಕ್ಷ ಎಂ.ಆರ್. ರಂಗಸ್ವಾಮಯ್ಯ, ಕಾರ್ಯದರ್ಶಿ ಜಯರಂಗಯ್ಯ, ರಂಗಸ್ವಾಮಿ, ರಂಗನಾಥ್, ಶಂಕರ್, ಶ್ರೀನಿವಾಸ್, ಎಚ್.ಎಂ. ನಾಗರಾಜು, ಮಲ್ಲಿಕಾರ್ಜುನ ಸ್ವಾಮಿ ಉಪಸ್ಥಿತರಿದ್ದರು.