2025ರಲ್ಲಿ ಪ್ರಯಾಗ್ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕಾಗಿ (Mahakumbh 2025) 3,000ಕ್ಕೂ ಹೆಚ್ಚು ವಿಶೇಷ ರೈಲುಗಳ ವ್ಯವಸ್ಥೆRailway. ಈ ರೈಲುಗಳಲ್ಲಿ 560 ರಿಂಗ್ ರೈಲುಗಳಾಗಿ ಕಾರ್ಯನಿರ್ವಹಿಸಲಿವೆ. ಪ್ರಯಾಗ್ರಾಜ್‌ದಲ್ಲಿನ ಒಂಬತ್ತು ಮುಖ್ಯ ನಿಲ್ದಾಣಗಳಲ್ಲಿ 560 ಟಿಕೆಟ್ ಕೌಂಟರ್‌ಗಳನ್ನು ನಿರ್ಮಿಸಲಾಗಿದೆ, ದಿನಕ್ಕೆ ಹತ್ತು ಲಕ್ಷ ಟಿಕೆಟ್ ವಿತರಿಸಲಾಗುವುದು.
ರೈಲುಗಳ ವಿಭಾಗ
- 1,800 ಅಲ್ಪ ದೂರ ರೈಲುಗಳು
- 700 ದೂರದ ರೈಲುಗಳು
- 560 ರಿಂಗ್ ರೈಲುಗಳು
ಮಹಾಕುಂಭದ ವಿಶೇಷತೆ
ಈ ವರ್ಷ ಪ್ರಯಾಗ್ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳ ಬಹಳ ವಿಶೇಷವಾದುದು. ಇಲ್ಲಿ ಪ್ರತೀ 12 ವರ್ಷಗಳಿಗೊಮ್ಮೆ ಪೂರ್ಣ ಕುಂಭ ಮೇಳ ನಡೆಯುತ್ತದೆ. ಈ ರೀತಿ 12 ಪೂರ್ಣ ಕುಂಭ ಮೇಳಗಳಾದಾಗ ಮಹಾಕುಂಭ ನಡೆಯುತ್ತದೆ. ಅಂದರೆ, ಪ್ರತೀ 144 ವರ್ಷಗಳಿಗೊಮ್ಮೆ ಮಹಾಕುಂಭ ನಡೆಯುತ್ತದೆ. ಹೆಚ್ಚೂಕಡಿಮೆ ಒಂದೂವರೆ ಶತಮಾನದ ಬಳಿಕ ಈ ಕುಂಭ ಮೇಳವು ಪ್ರಯಾಗ್ರಾಜ್‌ನಲ್ಲಿ ನಡೆಯುತ್ತಿದೆ. 2025ರ ಜನವರಿ 13ರಿಂದ ಫೆಬ್ರುವರಿ 26ರವರೆಗೆ 45 ದಿನಗಳವರೆಗೆ ಮಹಾಕುಂಭ ಇರಲಿದೆ. ಕೋಟಿಗಟ್ಟಲೆ ಜನರು ಈ ಮಹಾಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.