
ವಿಜಯ ಹಝಾರೆ ಟೂರ್ನಿಯಲ್ಲಿ (Vijay Hazare Tournament) ಕರ್ನಾಟಕ ತಂಡವು ಭರ್ಜರಿ ಪ್ರದರ್ಶನ ಮುಂದುವರೆಸಿದೆ. 4 ಪಂದ್ಯಗಳಲ್ಲಿ ಜಯ ಸಾಧಿಸಿದ ಕರ್ನಾಟಕ, ಗ್ರೂಪ್-ಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ 300 ಕ್ಕೂ ಅಧಿಕ ರನ್ ಕಲೆಹಾಕಿ ಗೆಲುವಿನ ನಿರೀಕ್ಷೆಯಲ್ಲಿದೆ.
ವಿಜಯ ಹಝಾರೆ ಟೂರ್ನಿಯಲ್ಲಿ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಅವರ ಸಿಡಿಲಬ್ಬರ ಮುಂದುವರೆದಿದೆ. ಪಂಜಾಬ್ ಮತ್ತು ಅರುಣಾಚಲ ಪ್ರದೇಶ್ ವಿರುದ್ಧದ ಪಂದ್ಯಗಳಲ್ಲಿ ಶತಕ ಸಿಡಿಸಿದ ಮಯಾಂಕ್, ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮೂರನೇ ಸೆಂಚುರಿ ಬಾರಿಸಿದ್ದಾರೆ.
ಹೈದರಾಬಾದ್ ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಆರಂಭಿಕನಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. 112 ಎಸೆತಗಳಲ್ಲಿ 124 ರನ್ ಬಾರಿಸಿದ ಅವರು ಬ್ಯಾಕ್ ಟು ಬ್ಯಾಕ್ ಮೂರು ಶತಕ ಸಿಡಿಸಿದ ಹಿರಿಮೆಗೆ ಪಾತ್ರರಾದರು.
ಈ ಪಂದ್ಯದಲ್ಲಿ ಸ್ಮರಣ್ 75 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 3 ಫೋರ್ ಗಳೊಂದಿಗೆ 83 ರನ್ ಬಾರಿಸಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡವು 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 320 ರನ್ ಕಲೆಹಾಕಿದೆ. ಹೈದರಾಬಾದ್ ತಂಡಕ್ಕೆ 321 ರನ್ ಗಳ ಗುರಿ ನೀಡಿದೆ.
ಹೈದರಾಬಾದ್ ಪ್ಲೇಯಿಂಗ್ 11: ತನ್ಮಯ್ ಅಗರ್ವಾಲ್, ತಿಲಕ್ ವರ್ಮಾ (ನಾಯಕ), ಕೋಡಿಮೇಲ ಹಿಮತೇಜ, ಅರವಲ್ಲಿ ಅವನೀಶ್ (ವಿಕೆಟ್ ಕೀಪರ್), ಕೆ ನಿತೇಶ್ ರೆಡ್ಡಿ, ತನಯ್ ತ್ಯಾಗರಾಜನ್, ರೋಹಿತ್ ರಾಯುಡು, ಏಲ್ಗಾನಿ ವರುಣ್ ಗೌಡ್, ಚಾಮ ವಿ ಮಿಲಿಂದ್, ಮೊಹಮ್ಮದ್ ಮುದ್ದಸ್ಸಿರ್, ಅನಿಕೇತ್ ರೆಡ್ಡಿ.
ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರವಾಲ್ (ನಾಯಕ), ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಅಭಿನವ್ ಮನೋಹರ್, ನಿಕಿನ್ ಜೋಸ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಅನೀಶ್ ಕೆ ವಿ, ಅಭಿಲಾಷ್ ಶೆಟ್ಟಿ, ಪ್ರವೀಣ್ ದುಬೆ, ವಾಸುಕಿ ಕೌಶಿಕ್, ವಿದ್ಯಾಧರ್ ಪಾಟೀಲ್.