ಕಾಂಗ್ರೆಸ್ ಪಕ್ಷದಿಂದ ಆಯೋಜನೆ ಮಾಡಲಾಗಿದ್ದ ಸಮಾವೇಶಕ್ಕಾಗಿ (Congress convention) ಆಹಾರ ಸಚಿವ ಮುನಿಯಪ್ಪ (K H Muniyappa) ಹಾಸನಕ್ಕೆ ತೆರಳುತ್ತಿದ್ದರು. ಹಾಸನ ತಾಲ್ಲೂಕಿನ ಶಾಂತಿಗ್ರಾಮ ಟೋಲ್ ಬಳಿ ಮುನಿಯಪ್ಪ ಅವರ ಕಾರಿಗೆ ಅಪಘಾತ ಸಂಭವಿಸಿತು.
ಹಾಸನದ ಅರಸೀಕೆರೆ ರಸ್ತೆಯ ಎಸ್ ಎಂ ಕೃಷ್ಣ ನಗರದಲ್ಲಿ ಇಂದು ಕಾಂಗ್ರೆಸ್ ಶಕ್ತಿ ಪ್ರದರ್ಶನ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಕೆಜೆ ಜಾರ್ಜ್, ಪ್ರಿಯಾಂಕ್ ಖರ್ಗೆ, ಎಚ್ ಸಿ ಮಹಾದೇವಪ್ಪ, ಸತೀಶ್ ಜಾರಕಿಹೊಳಿ, ಇತರ ಸಚಿವರುಗಳು ಭಾಗಿಯಾಗಲಿದ್ದಾರೆ.
ಮುನಿಯಪ್ಪ ಅವರು ಸಮಾವೇಶಕ್ಕೆ ಹಾಸನಕ್ಕೆ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಮತ್ತೊಂದು ಕಾರು ಅವರ ಕಾರಿಗೆ ಡಿಕ್ಕಿಯಾಗಿದೆ. ಅದೃಷ್ಟವಶಾತ್, ಪ್ರಾಣಾಪಾಯದಿಂದ ತಪ್ಪಿದ್ದು, ಸಚಿವರ ಕಾರು ಸಣ್ಣ ಪ್ರಮಾಣದಲ್ಲಿ ಜಖಂ ಆಗಿದೆ.
ಈ ಕಾರ್ಯಕ್ರಮವು ಸರ್ಕಾರ ವಿರುದ್ದ ಹೋರಾಡುತ್ತಿರುವ ವಿಪಕ್ಷಗಳಿಗೆ ಪ್ರತಿಕ್ರಿಯೆ ನೀಡಲು ಆಯೋಜಿಸಲಾಗಿದೆ.