2023-24ನೇ ಸಾಲಿನಲ್ಲಿ ಕರ್ನಾಟಕದಲ್ಲಿ (Karnataka) ನಿಯಮಗಳನ್ನು ಉಲ್ಲಂಘನೆ (Violation of rules) ಮಾಡುತ್ತಿರುವ ಹಾಗೂ ಡ್ರಗ್ಸ್ ಮಾರಾಟ (sale of drugs) ಮಾಡುತ್ತಿರುವ ಫಾರ್ಮಸಿಗಳ ವಿರುದ್ಧ (pharmacies violating rules) ಕ್ರಮ ಕೈಗೊಂಡಿದ್ದು, 292 ಫಾರ್ಮಸಿಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Health Minister Dinesh Gundu Rao) ಮಾಹಿತಿ ನೀಡಿದ್ದಾರೆ. 1,245 ಫಾರ್ಮಸಿಗಳ ಲೈಸೆನ್ಸ್ ಅಮಾನತುಗೊಳಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಬಳ್ಳಾರಿ ಬಾಣಂತಿಯರ ಸಾವು ಮತ್ತು ಮಾದಕ ದ್ರವ್ಯಗಳ ಅಕ್ರಮ ಮಾರಾಟದ ಆರೋಪಗಳ ಮಧ್ಯೆ, 292 ಫಾರ್ಮಸಿಗಳ ಪರವಾನಗಿಯನ್ನು ಹಿಂಪಡೆಯಲಾಗಿದೆ. 37,130 ಖಾಸಗಿ ಫಾರ್ಮಸಿಗಳಲ್ಲಿನ ಅಕ್ರಮಗಳನ್ನು ಪತ್ತೆಹಚ್ಚುವಲ್ಲಿ 1,245 ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಕುರಿತು ಪ್ರತಿಪಕ್ಷದ ಸದಸ್ಯರ ಪ್ರಶ್ನೆಗೆ, ಅಗತ್ಯ ಔಷಧಗಳನ್ನು ಖರೀದಿಸಲು ಖಾತೆಯಲ್ಲಿ ಸಾಕಷ್ಟು ಹಣವಿದ್ದು, 2 ವರ್ಷಗಳಿಗೆ 1 ಬಾರಿಗೆ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು.