ಮುಕೇಶ್ ಅಂಬಾನಿ (Mukesh Ambani) ಅವರ ರಿಲಯನ್ಸ್ ಇಂಡಸ್ಟ್ರೀಸ್, (Reliance Industries) ಅಮೆರಿಕಾದ ವೇವ್ಟೆಕ್ ಹೀಲಿಯಂ ಕಂಪನಿಯಲ್ಲಿ 1.2 ಕೋಟಿ ಡಾಲರ್ ಹೂಡಿಕೆ ಮಾಡಿಕೊಂಡಿದೆ. ಇದು ರಿಲಯನ್ಸ್ ಕಡಿಮೆ ಇಂಗಾಲದ ಪರಿಹಾರ ವಿಸ್ತರಣಾ ಯೋಜನೆಯ ಭಾಗವಾಗಿದೆ.
ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡಲು ಸದಾ ಪ್ರಯತ್ನಿಸುತ್ತಾರೆ. ಇತ್ತೀಚೆಗೆ, ಅವರು ಅಮೆರಿಕದ ವೇವ್ಟೆಕ್ ಹೀಲಿಯಂ ಇನ್‌ಕಾರ್ಪೊರೇಷನ್‌ನಲ್ಲಿ 1.2 ಕೋಟಿ ಡಾಲರ್ ಹೂಡಿಕೆ ಮಾಡಿ, ಕಂಪನಿಯ 21% ಷೇರುಗಳನ್ನು ಖರೀದಿಸಿದ್ದಾರೆ. ಈ ಒಪ್ಪಂದವು 2024 ನವೆಂಬರ್ 27ರಂದು ನಡೆದಿದೆ.
ರಿಲಯನ್ಸ್ ಇಂಡಸ್ಟ್ರೀಸ್‍ನ ಅಂಗಸಂಸ್ಥೆ RFIUL (Reliance Finance and Investments USA LLC) 12 ಮಿಲಿಯನ್ ಡಾಲರ್ರ್‍ಗೆ ವೇವ್ಟೆಕ್ ಹೀಲಿಯಂ (Wavetech Helium Incorporation) ನ ಷೇರುಗಳನ್ನು ಖರೀದಿಸಿದೆ. ವೇವ್ಟೆಕ್ ಕಂಪನಿ ಹೀಲಿಯಂ ಅನಿಲದ ಶೋಧ ಮತ್ತು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಈ ಹೂಡಿಕೆ ರಿಲಯನ್ಸ್ ನ ವಿಸ್ತರಣಾ ಯೋಜನೆಗಳ ಭಾಗವಾಗಿದೆ.
ವೇವ್ಟೆಕ್ ಹೀಲಿಯಂ ಅಮೆರಿಕಾದ ಒಂದು ದೊಡ್ಡ ಕಂಪನಿಯಾಗಿದ್ದು, 2021 ರಲ್ಲಿ ಸ್ಥಾಪಿಸಲಾಯಿತು. 2024 ರಲ್ಲಿ ಅದರ ವ್ಯಾಪಾರದ ಪ್ರಾರಂಭವಾಗಿದೆ. ಕಂಪನಿಯ ಮುಖ್ಯ ಉದ್ದೇಶ ಹೀಲಿಯಂ ಅನಿಲವನ್ನು ಹುಡುಕುವುದು, ಇದು ವೈದ್ಯಕೀಯ, ವೈಜ್ಞಾನಿಕ ಸಂಶೋಧನೆ, ಏರೋಸ್ಪೇಸ್, ಫೈಬರ್ ಆಪ್ಟಿಕ್ಸ್ ಮುಂತಾದ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ.
ರಿಲಯನ್ಸ್ ಈಗ ಕಡಿಮೆ ಇಂಗಾಲದ ಪರಿಹಾರಗಳ ಮೇಲೆ ಕೇಂದ್ರೀಕರಿಸಿಕೊಂಡಿದೆ. ಹೀಲಿಯಂ ಕಂಪನಿಯಲ್ಲಿ ಹೂಡಿಕೆ ಮಾಡುವುದು ಇದರ ಭಾಗವಾಗಿದೆ. RIL ಹೇಳಿದಂತೆ, ಈ ಸ್ವಾಧೀನವು ಕಂಪನಿಯ ಕಡಿಮೆ ಇಂಗಾಲದ ಪರಿಹಾರಗಳಲ್ಲಿ ಪರಿಶೋಧನೆ ಮತ್ತು ಉತ್ಪಾದನಾವ್ಯವಹಾರವನ್ನು ವಿಸ್ತರಿಸುವ ತಂತ್ರದ ಭಾಗವಾಗಿದೆ.
ಇದಕ್ಕೂ ಮೊದಲು, ರಿಲಯನ್ಸ್ ಇಂಡಸ್ಟ್ರೀಸ್ ನವೆಂಬರ್ 2024 ರಲ್ಲಿ ವಯಾಕಾಮ್ 18 ಮತ್ತು ಡಿಸ್ನಿಯ ಒಪ್ಪಂದವನ್ನು ಪೂರ್ಣಗೊಳಿಸಿದೆ. ಈ ಒಪ್ಪಂದದೊಂದಿಗೆ, ಡಿಸ್ನಿ ಸ್ಟಾರ್ ಇಂಡಿಯಾ ಮತ್ತು ರಿಲಯನ್ಸ್‌ನ ವಯಾಕಾಮ್ 18 ಈಗ ಒಂದಾಗಿದೆ.