Mulbagal, Kolar : ಮುಳಬಾಗಿಲು ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ MES College ನ ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ (Guruvandana Programme) ಏರ್ಪಡಿಸಲಾಗಿತ್ತು.
1960-70ರ ದಶಕದಲ್ಲಿ ವಿದ್ಯಾಭ್ಯಾಸ ಮಾಡುವುದೇ ಕಷ್ಟಕರವಾಗಿತ್ತು. ಆಗಿನ ಕಾಲದಲ್ಲಿ ಸಾರಿಗೆ ವ್ಯವಸ್ಥೆಯೂ ಇರದಿದ್ದರೂ ಪಿಯುಸಿ, ಪದವಿ ಶಿಕ್ಷಣ ಪಡೆಯಲು ಕೋಲಾರ ಸೇರಿದಂತೆ ದೂರದ ಪ್ರದೇಶಗಳಿಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಇಂತಹ ಸಮಯದಲ್ಲಿ ಮುಳಬಾಗಿಲು ಅನೇಕ ದಾನಿಗಳ ಸಹಾಯದಿಂದ ಎಜುಕೇಷನ್ ಸೊಸೈಟಿ (ಎಂಇಎಸ್) ಸ್ಥಾಪಿಸಿ ಇಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುವಂತೆ ಮಾಡಿದ್ದರಿಂದ ಹಲವು ಮಂದಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ಬಿ.ಎಸ್. ವೆಂಕಟಾಚಲಪತಿ ಹೇಳಿದರು.
ನಿವೃತ್ತ ಐಪಿಎಸ್ ಅಧಿಕಾರಿ ಎನ್. ಶಿವಪ್ರಸಾದ್, ಪ್ರಾಂಶುಪಾಲ ಡಾ.ಜಿ. ಮುನಿ ವೆಂಕ ಟಪ್ಪ, ಹಳೇ ವಿದ್ಯಾರ್ಥಿಗಳಾದ ನಿವೃತ್ತ ಐಎಎಸ್ ಅಧಿಕಾರಿ ಸಾವಿತ್ರಮ್ಮ, ಎ.ಪಿ.ಜೆ ಅಬ್ದುಲ್ ಕಲಾಂ ಅವರಿಗೆ ಆಪ್ತ ಸಹಾಯಕರಾಗಿದ್ದ ನರ್ಮಧಾಂಬ, ವಕೀಲ ಸಾಮೇಗೌಡ, ಉಪನ್ಯಾಸಕ ಎ.ವಿ. ಶಿವಶಂಕರರೆಡ್ಡಿ, ಅಲಂಗೂರು ಮಂಜುನಾಥ್, ಸಂಸದೀಯ ವ್ಯವಹಾರಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ. ಶ್ರೀಧರ್ ಮಾತನಾಡಿದರು. ನಿವೃತ್ತರಾಗಿರುವ ವಿ. ನಾರಾಯಣಸ್ವಾಮಿ, ನಂಜುಂಡಗೌಡ, ಶ್ರೀನಿವಾಸರೆಡ್ಡಿ, ವರದರಾಜು, ರಾಮಣ್ಣ, ಆದಿನಾರಾಯಣಶೆಟ್ಟಿ, ಕಾಲೇಜಿಗೆ ಸ್ಥಳ ದಾನ ಮಾಡಿದ ವರದರಾಜಗುಪ್ತ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.