Mysuru : ಸೋಮವಾರದಿಂದ 44,602 ಆರೋಗ್ಯ ಕಾರ್ಯಕರ್ತರು, 39,370 ಮುಂಚೂಣಿ ಕಾರ್ಯಕರ್ತರು (Frontline Workers) ಹಾಗೂ 60 ವರ್ಷ ದಾಟಿದ 3.95 ಲಕ್ಷ ಮಂದಿಗೆ ಬೂಸ್ಟರ್ ಡೋಸ್ (Precatutionary/Booster Dose) ಹಾಕುವ ಕಾರ್ಯಕ್ಕೆ Mysore ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಕೃಷ್ಣರಾಜ ವಿಧಾನಸಭಾ ವ್ಯಾಪ್ತಿ ಯಲ್ಲಿ ಸೇಠ್ ಮೋಹನದಾಸ್ ತುಳಸಿದಾಸ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 11.30ಕ್ಕೆ ಲಸಿಕೆ ಕಾರ್ಯಕ್ರಮಕ್ಕೆ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಲಿದ್ದು ಎರಡನೇ ಡೋಸ್ ಪಡೆದು 39 ವಾರ ಪೂರೈಸಿದವರಿಗೆ ಮಾತ್ರ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಈ ಮೊದಲು ಯಾವ ಲಸಿಕೆ ಪಡೆದಿರುತ್ತಾರೋ ಅದೇ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ನೀಡಲಾಗುತ್ತದೆ