Friday, September 20, 2024
HomeKarnatakaMysuruMysuru ಮೃಗಾಲಯದಲ್ಲಿ ‘Gorilla ಮನೆ’ ಅನಾವರಣ

Mysuru ಮೃಗಾಲಯದಲ್ಲಿ ‘Gorilla ಮನೆ’ ಅನಾವರಣ

Mysuru : ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (CSR) ₹ 2.70 ಕೋಟಿ ವೆಚ್ಚದಲ್ಲಿ ಮೈಸೂರು ನಗರದ ಚಾಮರಾಜೇಂದ್ರ ಮೃಗಾಲಯದ (Sri Chamarajendra Zoological Gardens – Mysore Zoo) ನೂತನ ಆವರಣದಲ್ಲಿ ಇನ್ಫೊಸಿಸ್‌ ಪ್ರತಿಷ್ಠಾನವು (Infosys Foundation) ಗೊರಿಲ್ಲಾ ವಾಸ್ತವ್ಯಕ್ಕಾಗಿ ವಿಶೇಷ ವಾಗಿ ನಿರ್ಮಿಸಿರುವ ‘ಮನೆ’ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ವರ್ಚುವಲ್‌ ವೇದಿಕೆ ಮೂಲಕ ಉದ್ಘಾಟಿಸಿದರು. ಪ್ರಸ್ತುತ ಜರ್ಮನಿಯಿಂದ ಪ್ರಾಣಿಗಳ ವಿನಿಮಯ ಒಪ್ಪಂದದಡಿ ತರಲಾಗಿರುವ ಎರಡು ಗೊರಿಲ್ಲಾಗಳು Taboo, Demba (ಟಬೂ–14, ಡೆಂಬ–8) ಇಲ್ಲಿ ಇರಿಸಲಾಗಿದೆ.

ಕಾರ್ಯಕ್ರಮದಲ್ಲಿ ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾಮೂರ್ತಿ (Sudha Murthy) ಭಾಗವಹಿಸಿ ಮೃಗಾಲಯ ನಿರ್ವಹಣೆ ಬಗ್ಗೆ ಸುಧಾಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾಮೂರ್ತಿ ಅವರನ್ನು ಶ್ಲಾಘಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ (S. T. Somashekhar), ಅರಣ್ಯ ಸಚಿವ ಉಮೇಶ್ ವಿ.ಕತ್ತಿ (Umesh Katti), ಶಾಸಕ ಎಸ್‌.ಎ.ರಾಮದಾಸ್‌ (S. A. Ramadas), ಮೇಯರ್‌ ಸುನಂದಾ ಫಾಲನೇತ್ರ (Mysore Mayor Sunanda Palanetra), ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಗೋಕುಲ್ ಗೋವರ್ಧನ್, ಜ್ಯೋತಿ ರೇಚಣ್ಣ, ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಹಾಗೂ ಅಜಿತ್‌ ಕುಲಕರ್ಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -

Image: Sri Chamarajendra Zoological Gardens

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page