back to top
20.5 C
Bengaluru
Tuesday, July 15, 2025
HomeIndiaPunjab20 ನಿಮಿಷಗಳ ಕಾಲ Flyover ನಲ್ಲಿ ಸಿಲುಕಿಕೊಂಡ ಪ್ರಧಾನಿ Modi

20 ನಿಮಿಷಗಳ ಕಾಲ Flyover ನಲ್ಲಿ ಸಿಲುಕಿಕೊಂಡ ಪ್ರಧಾನಿ Modi

- Advertisement -
- Advertisement -

Punjab: ಸುಮಾರು 20 ನಿಮಿಷಗಳ ಕಾಲ ಫ್ಲೈಓವರ್‌ನಲ್ಲಿ (Flyover) ಸಿಲುಕಿಕೊಂಡ ಕಾರಣ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಪಂಜಾಬ್‌ನಲ್ಲಿ (Punjab) ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬಟಿಂಡಾದ (Bathinda) ವಿಮಾನ ನಿಲ್ದಾಣಕ್ಕೆ ಮರಳಿದರು.

ಪ್ರತಿಭಟನಾನಿರತ ರೈತರು ರಸ್ತೆಯನ್ನು ಅಡ್ಡಗಟ್ಟಿದ್ದರಿಂದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ವಾಪಸಾದರು. ಇದನ್ನು ಭಾರೀ ಭದ್ರತಾ ಉಲ್ಲಂಘನೆ ಎಂದು ಕರೆದಿರುವ ಬಿಜೆಪಿ ಚುನಾವಣಾ ಪೂರ್ವದಲ್ಲಿ ಕೇಂದ್ರ BJP ಮತ್ತು ಕಾಂಗ್ರೆಸ್ (Congress) ಆಡಳಿತದ ರಾಜ್ಯದ ನಡುವೆ ಸಂಘರ್ಷವನ್ನು ಉಂಟುಮಾಡಿದೆ.

ಗೃಹ ಸಚಿವಾಲಯ (Home Ministry) ತನ್ನ ಹೇಳಿಕೆಯಲ್ಲಿ Congress ಸರ್ಕಾರವು ಭೇಟಿಯ ತಯಾರಿಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿದೆ. “ಪ್ರಧಾನಿ 15-20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿಕೊಂಡರು. ಇದು ಪ್ರಧಾನಿಯ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ” ಎಂದು ಗೃಹ ಸಚಿವಾಲಯ ಹೇಳಿದೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page