back to top
26.5 C
Bengaluru
Thursday, November 21, 2024
HomeHealthNeuroticism: ಖಿನ್ನತೆಯಿಂದ ಕೂಡಿದ ಮಾನಸಿಕ ವ್ಯಾಧಿ

Neuroticism: ಖಿನ್ನತೆಯಿಂದ ಕೂಡಿದ ಮಾನಸಿಕ ವ್ಯಾಧಿ

- Advertisement -
- Advertisement -

ದಿನದ ಕೆಲವು ಸಮಯ ಅಥವಾ ವಾರದಲ್ಲಿ ಬಿಡುವಿನ ವೇಳೆಯಲ್ಲಿ ಸ್ವಲ್ಪ ಸಮಯದ ವರೆಗೆ, ಟಿವಿ ಅಥವಾ ಸಿನಿಮಾ ಮಂದಿರಗಳಲ್ಲಿ ಕುಳಿತು ತಮ್ಮ ಆಯ್ಕೆಯ ಚಲನಚಿತ್ರವನ್ನು ನೋಡಿ ಆನಂದಿಸುತ್ತಾರೆ.

ಆದರೆ ಸಿನಿಮಾಗಳಲ್ಲಿನ ಭಾವನಾತ್ಮಕ ಅಥವಾ ಸೆಂಟಿಮೆಂಟ್ ದೃಶ್ಯಗಳನ್ನು ನೋಡಿದಾಗ ಕೆಲವರಿಗೆ ಅಳು ಬರುತ್ತದೆ. ಇದು ಕೇವಲ ನಟನೆಯಾಗಿದ್ದರೂ ಕೂಡ, ಆ ಚಿತ್ರದ ಕೆಲವು ದೃಶ್ಯಗಳು ತುಂಬಾ ಭಾವನಾತ್ಮಕವಾಗಿದ್ದು ಕಣ್ಣೀರು ತರಿಸುತ್ತದೆ.

US ಸಂಶೋಧಕರ (US researchers) ಹೊಸ ಅಧ್ಯಯನದ ಪ್ರಕಾರ, ಈ ರೀತಿ ಭಾವನೆಗಳನ್ನು ಹೊಂದಿರುವರು ಅಕಾಲಿಕ ಸಾವಿನ ಹೆಚ್ಚಿನ ಅಪಾಯದಲ್ಲಿದ್ದಾರೆ. ಅಂದರೆ ನ್ಯೂರೋಟಿಸಿಸಂ (Neuroticism) ಹೊಂದಿರುವ ಜನರು ಇದೇ ರೀತಿಯ ನಡವಳಿಕೆಗಳನ್ನು ಹೊಂದಿರುತ್ತಾರೆ.

ಜೊತೆಗೆ ಶೇಕಡಾ 10 ರಷ್ಟು ಅಕಾಲಿಕ ಸಾವಿನ ಅಪಾಯವನ್ನು ಹೊಂದಿದ್ದಾರೆ ಎಂದು ಸಂಶೋಧನೆಗಳು ತೋರಿಸಿಕೊಟ್ಟಿವೆ.

Neuroticism ಲಕ್ಷಣ

  • ನ್ಯೂರೋಟಿಸಿಸಂನಿಂದ (Neuroticism) ಬಳಲುತ್ತಿರುವ ಜನರು ಭಯ, ದುಃಖ ಮತ್ತು ಕಿರಿಕಿರಿಯಂತಹ ನಕಾರಾತ್ಮಕ ಭಾವನೆಗಳನ್ನು ಹೊಂದುವ ಸಾಧ್ಯತೆಯಿದೆ. ಜೊತೆಗೆ ಒಂಟಿತನ, ಆತಂಕ, ಕಿರಿಕಿರಿಯಂತಹ ವಿವಿಧ ಭಾವನೆಗಳು ಮನಸ್ಸು ಮತ್ತು ದೇಹದ ಆರೋಗ್ಯವನ್ನು ಹಾಳು ಮಾಡುತ್ತವೆ.
  • ವಿಜ್ಞಾನಿಗಳು ಒಂಟಿತನವನ್ನು ಅಕಾಲಿಕ ಸಾವಿನ ಬಲವಾದ ಮುನ್ಸೂಚನೆ ಎಂದು ಗುರುತಿಸಿದ್ದಾರೆ. ಈ ರೀತಿಯ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಸ್ವಯಂ- ಹಾನಿ, ಉಸಿರಾಟ ಮತ್ತು ಜೀರ್ಣಾಂಗ ವ್ಯವಸ್ಥೆಯ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ನ್ಯೂರೋಟಿಸಿಸಂನಿಂದ ಬಳಲುತ್ತಿರುವವರಲ್ಲಿ ಮಾನಸಿಕ ಬೇಸರವು ಸಾವಿನ ಅಪಾಯದೊಂದಿಗೆ ಸಂಬಂಧಿಸಿದೆ.

ಒಟ್ಟಾರೆಯಾಗಿ, ಈ ರೋಗವು ಪುರುಷರಲ್ಲಿ ಹೆಚ್ಚು ಪ್ರಚಲಿತವಾಗಿದ್ದು 54 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಂಡು ಬರುತ್ತದೆ ಎಂದು ಸಂಶೋಧನಾ ತಂಡವು ಕಂಡು ಹಿಡಿದಿದೆ.

ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿ (Florida State University) ನೇತೃತ್ವದ ಸಂಶೋಧಕರ ತಂಡವು UK ಬಯೋಬ್ಯಾಂಕ್ ಡೇಟಾದಲ್ಲಿ (UK Biobank data) 500,000 ಜನರ 17 ವರ್ಷಗಳ ಜೀವನವನ್ನು ಅಧ್ಯಯನ ಮಾಡಿದೆ.

ಇದು ಅರ್ಧ ಮಿಲಿಯನ್ ಜನರಿಂದ ಸಂಗ್ರಹಿಸಿದ ಜೈವಿಕ ಮಾದರಿಗಳು, ತಳಿಶಾಸ್ತ್ರ, ಜೀವನಶೈಲಿ ಮತ್ತು ಆರೋಗ್ಯ ಮಾಹಿತಿಯ ದೊಡ್ಡ ಡೇಟಾಬೇಸ್ ಆಗಿದೆ.

ನ್ಯೂರೋಟಿಸಿಸಂ ಮೌಲ್ಯಮಾಪನ ಸಂಗ್ರಹಿಸಲಾಗಿದ್ದು ಈ ವ್ಯಕ್ತಿಗಳು ಬದುಕಿದ್ದಾರೆಯೇ ಅಥವಾ ಸತ್ತಿದ್ದಾರೆಯೇ ಎಂದು ಪತ್ತೆಹಚ್ಚಿದ್ದಾರೆ.

ಆಶ್ಚರ್ಯಕರವೆಂಬಂತೆ, ಈ 17 ವರ್ಷಗಳ ಅವಧಿಯಲ್ಲಿ ಸುಮಾರು 500,000 ಜನರಲ್ಲಿ 43,400 ಜನರು ಸಾವನ್ನಪ್ಪಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಅವರ ಸಾವಿಗೆ ಮುಖ್ಯ ಕಾರಣ ಕ್ಯಾನ್ಸರ್, ಉಸಿರಾಟದ ವ್ಯವಸ್ಥೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಕಾಯಿಲೆಗಳು ಎಂದು ಡೇಟಾ ತೋರಿಸಿದೆ.

ನಿರ್ದಿಷ್ಟವಾಗಿ ಸತ್ತವರೆಲ್ಲರೂ ತಮ್ಮ ಜೀವನದಲ್ಲಿ ನಿರಂತರವಾಗಿ ಒತ್ತಡದಲ್ಲಿದ್ದರು. ನ್ಯೂರೋಟಿಸಿಸಂ ಗೆ ಇತರ ಸಮಸ್ಯೆಗಳಿಗಿಂತ ಒಂಟಿತನವು ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಪ್ರೊಫೆಸರ್ ಆಂಟೋನಿಯೊ ಟೆರಾಸಿಯಾನೊ ಹೇಳಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page