ಕೆಲ ದಿನಗಳ ಹಿಂದೆ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ (Honda Bikes) ಇಂಡಿಯಾ ತನ್ನ ‘CB 125 ಹಾರ್ನೆಟ್’ ಮತ್ತು ‘ಶೈನ್ 100 DX’ ಮಾದರಿಗಳ (CB125 Hornet and Shine 100 DX) ಅಪ್ಡೇಟ್ಡ್ ಆವೃತ್ತಿಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಈ ಬೈಕ್‌ಗಳ ವಿಶೇಷತೆ, ಫೀಚರ್ಸ್ ಮತ್ತು ಬೆಲೆ.
ಹೋಂಡಾ CB125 ಹಾರ್ನೆಟ್ ವೈಶಿಷ್ಟ್ಯಗಳು
- 123.94cc ಎಂಜಿನ್, 11 bhp ಪವರ್ ಮತ್ತು 11.2 Nm ಟಾರ್ಕ್ ಉತ್ಪಾದನೆ
- 5-ಸ್ಪೀಡ್ gearbox
- 4.2 ಇಂಚಿನ TFT ಡಿಸ್ಪ್ಲೇ – ಬ್ಲೂಟೂತ್, ನ್ಯಾವಿಗೇಶನ್, ಮ್ಯೂಸಿಕ್, ಕರೆ, ಮೆಸೇಜ್ ಅಲರ್ಟ್
- ಫುಲ್ LED ಲೈಟಿಂಗ್ ಮತ್ತು ಹೊಸ ವಿನ್ಯಾಸದ ಹೆಡ್ಲೈಟ್
- ಲಭ್ಯವಿರುವ ಬಣ್ಣಗಳು: ರೆಡ್, ಫ್ಲೋರಸೆಂಟ್ ಯೆಲ್ಲೋ, ಬ್ಲೂ, ಬ್ಲ್ಯಾಕ್
- ಬೆಲೆ: ₹1.12 ಲಕ್ಷ (ಎಕ್ಸ್-ಶೋರೂಂ)
- ಸ್ಪರ್ಧಿಗಳು: TVS Rider 125, ಹೀರೋ Xtreme 125R, ಬಜಾಜ್ ಪಲ್ಸರ್ N125
ಹೋಂಡಾ ಶೈನ್ 100 DX ವೈಶಿಷ್ಟ್ಯಗಳು
- 98.98cc ಎಂಜಿನ್, 7.2 bhp ಪವರ್, 8.04 Nm ಟಾರ್ಕ್
- 4-ಸ್ಪೀಡ್ gearbox
- 17-ಇಂಚಿನ ಟ್ಯೂಬ್ಲೆಸ್ ಟೈರ್ಸ್, ಪ್ರಿಲೋಡ್ ಅಡ್ಜಸ್ಟಬಲ್ ಶಾಕ್ ಅಬ್ಸಾರ್ಬರ್ಹೊಸ LCD
- ಡಿಸ್ಪ್ಲೇ, ಮೈಲೇಜ್ ಮತ್ತು ದೂರ ಸೂಚನೆ
- ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸಿಸ್ಟಮ್
- ಬೆಲೆ: ₹74,959 (ಎಕ್ಸ್-ಶೋರೂಂ)
ಹೋಂಡಾ ತನ್ನ CB125 ಹಾರ್ನೆಟ್ ಮತ್ತು ಶೈನ್ 100 DX ಬೈಕ್‌ಗಳ ಹೊಸ ಆವೃತ್ತಿಗಳನ್ನು ಹೊಸ ತಂತ್ರಜ್ಞಾನ ಮತ್ತು ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. ಇದರಿಂದ ವಿಭಿನ್ನ ಬಜೆಟ್‌ಗಳಲ್ಲಿ ಬೈಕ್ ಹುಡುಕುತ್ತಿರುವ ಗ್ರಾಹಕರಿಗೆ ಉತ್ತಮ ಆಯ್ಕೆಗಳು ಲಭ್ಯವಿವೆ.