Bengaluru: 2025ರಿಂದ ಭೂಮಿ ಮತ್ತು ಮನೆ ನೋಂದಣಿಯನ್ನು (Registration Rule) ಸಂಪೂರ್ಣ ಡಿಜಿಟಲ್ ಮಾಡಲಾಗಿದೆ. ನೋಂದಣಿ ಪ್ರಕ್ರಿಯೆ ಸುಲಭಗೊಳ್ಳಲಿದ್ದು, ಡಿಜಿಟಲ್ ಸಹಿ (Digital Signature) ಮೂಲಕ ಪ್ರಮಾಣಪತ್ರ ಲಭ್ಯವಿರಲಿದೆ.
ಮುಖ್ಯ ಬದಲಾವಣೆಗಳು
- Online ಭೂಮಿ ನೋಂದಣಿ ಪ್ರಕ್ರಿಯೆ ಆರಂಭ
- ಆಧಾರ್ ಲಿಂಕ್ ಕಡ್ಡಾಯ– ನಕಲಿ ದಾಖಲೆಗಳಿಗೆ ಕಡಿವಾಣ
- ವೀಡಿಯೋ ದಾಖಲೆ ಕಡ್ಡಾಯ– ಭ್ರಷ್ಟಾಚಾರ ತಡೆ ಮತ್ತು ಭೂ ವಿವಾದ ನಿಯಂತ್ರಣ
2025ರಿಂದ ನೀವು ಮನೆಯಲ್ಲಿ ಕುಳಿತುಕೊಂಡೇ ಭೂಮಿ ಅಥವಾ ಮನೆ ನೋಂದಣಿ ಮಾಡಿಸಬಹುದು. ಎಲ್ಲಾ ದಾಖಲೆಗಳನ್ನು Online ಮೂಲಕ ಸಲ್ಲಿಸಲು ಅವಕಾಶವಿದ್ದು, ಹಳೆಯ ಪೇಪರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
ಆಧಾರ್ ಲಿಂಕ್ ಕಡ್ಡಾಯವಾಗಿರುವುದರಿಂದ, ಇದು ನಕಲಿ ದಾಖಲೆಗಳು, ಭೂ ವಂಚನೆ, ಮತ್ತು ಬೇನಾಮಿ ಆಸ್ತಿಗಳನ್ನು ತಡೆಯಲು ಸಹಾಯ ಮಾಡಲಿದೆ.
ನೋಂದಣಿಯನ್ನು ಪಾರದರ್ಶಕವಾಗಿಡಲು ಮತ್ತು ಭೂ ವಿವಾದಗಳನ್ನು ತಡೆಯಲು ವೀಡಿಯೋ ದಾಖಲೆ ಕಡ್ಡಾಯ ಮಾಡಲಾಗಿದೆ. ಇದು ಸತ್ಯಾಸತ್ಯತೆ ಪರಿಶೀಲನೆಗೆ ಉಪಯೋಗಿಸಲಾಗುವುದು.
ನೋಂದಣಿ ಶುಲ್ಕಗಳು ಮತ್ತು ತೆರಿಗೆ ದರಗಳು
- ₹20 ಲಕ್ಷಗಿಂತ ಕಡಿಮೆ ಮೌಲ್ಯದ ಆಸ್ತಿಗೆ 2%
- ₹21-45 ಲಕ್ಷ ಮೌಲ್ಯದ ಆಸ್ತಿಗೆ 3%
- ₹5 ಕೋಟಿ ಗಿಂತ ಹೆಚ್ಚಿನ ಆಸ್ತಿಗೆ 5%
ಎಲ್ಲಾ ನೋಂದಣಿ ಶುಲ್ಕ, ತೆರಿಗೆಗಳನ್ನು ನೇರವಾಗಿ Onlineನಲ್ಲಿ ಪಾವತಿಸಬಹುದು.
ನೋಂದಣಿ ರದ್ದತಿ ನಿಯಮ
- 90 ದಿನಗಳೊಳಗೆ ನೋಂದಣಿ ರದ್ದುಗೊಳಿಸಲು ಅವಕಾಶ.
- ಕುಟುಂಬ ಸದಸ್ಯರ ಆಕ್ಷೇಪಣೆ ಅಥವಾ ಅಕ್ರಮ ದಾಖಲೆಗಳ ಆಧಾರದ ಮೇಲೆ ನೋಂದಣಿ ರದ್ದುಗೊಳಿಸಬಹುದು.
ಭೂಮಿ ನೋಂದಣಿಗೆ ಅಗತ್ಯವಾದ ಪ್ರಮುಖ ದಾಖಲೆಗಳು
- ಆಸ್ತಿ ಹಕ್ಕುಪತ್ರ (Property Deed)
- ಖರೀದಿ-ಮಾರಾಟ ಒಪ್ಪಂದ ಪತ್ರ (Sale Agreement)
- ಆಸ್ತಿ ತೆರಿಗೆ ರಸೀದಿ (Property Tax Receipt)
- ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ
- ಮಾರಾಟಗಾರ ಮತ್ತು ಖರೀದಿದಾರರ ಗುರುತಿನ ದಾಖಲೆಗಳು
ಈ ಹೊಸ ನಿಯಮಗಳ ಮೂಲಕ ಭೂಮಿ ಮತ್ತು ಮನೆ ನೋಂದಣಿ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಲಿದ್ದು, ಭ್ರಷ್ಟಾಚಾರ ತಡೆಯಲು ಸಹಾಯ ಮಾಡಲಿದೆ.