
ಎಪ್ರಿಲ್ 1, 2025 ರಿಂದ, ಸರಿಯಾದ ಪರಿಶೀಲನೆಯಿಲ್ಲದೆ ಸಿಮ್ ಕಾರ್ಡ್ (SIM card) ಮಾರಾಟ ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ಸರ್ಕಾರ ಸೈಬರ್ ವಂಚನೆ ತಡೆಯಲು ಹೊಸ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ದೂರಸಂಪರ್ಕ ಇಲಾಖೆ ಎಲ್ಲಾ ಡೀಲರ್‌ಗಳು ಮತ್ತು ಟೆಲಿಕಾಂ ಕಂಪನಿಗಳಿಗೆ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯಗೊಳಿಸಿದೆ. ಮಾರ್ಚ್ 31, 2025ರೊಳಗೆ ಡೀಲರ್‌ಶಿಪ್ ನೋಂದಾಯಿಸದಿದ್ದರೆ, ಏಪ್ರಿಲ್ 1 ರಿಂದ ಅವರು ಸಿಮ್ ಕಾರ್ಡ್ ಮಾರಾಟ ಮಾಡಲು ಸಾಧ್ಯವಿಲ್ಲ.
ಬಯೋಮೆಟ್ರಿಕ್ ಪರಿಶೀಲನೆ ಇಲ್ಲದೆ ಸಿಮ್ ಕಾರ್ಡ್ ಮಾರಾಟ ಮಾಡಿದರೆ, ಡೀಲರ್ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸರ್ಕಾರ 2.50 ಕೋಟಿ ನಕಲಿ ಸಿಮ್‌ಗಳನ್ನು ನಿರ್ಬಂಧಿಸಿದೆ.
ಈ ಹೊಸ ನಿಯಮಗಳು ಸಾರ್ವಜನಿಕರ ಸುರಕ್ಷತೆಗಾಗಿ ಜಾರಿಗೆ ತರಲಾಗಿದ್ದು, ಟೆಲಿಕಾಂ ಕಂಪನಿಗಳು ಮತ್ತು ಡೀಲರ್‌ಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.