Home Karnataka PFI ಚಟುವಟಿಕೆಗಳಿಗೆ ಹಣ ಹಂಚುತ್ತಿದ್ದ ವ್ಯಕ್ತಿ ಬಂಧನ

PFI ಚಟುವಟಿಕೆಗಳಿಗೆ ಹಣ ಹಂಚುತ್ತಿದ್ದ ವ್ಯಕ್ತಿ ಬಂಧನ

Arrest

Bengaluru: ಕರ್ನಾಟಕ ಮತ್ತು ಕೇರಳದಲ್ಲಿನ (Karnataka and Kerala)ನಿಷೇಧಿತ PFIಸಂಘಟನೆಯ ಚಟುವಟಿಕೆಗಳಿಗೆ ದುಬೈನಿಂದ ಹಣವನ್ನು ಅಕ್ರಮವಾಗಿ ಹಂಚುತ್ತಿದ್ದ ಬಿಹಾರ ಮೂಲದ ವ್ಯಕ್ತಿ ಮೊಹಮ್ಮದ್ ಸಜ್ಜದ್ ಆಲಂನನ್ನು NIA ದೆಹಲಿಯಲ್ಲಿ ಬಂಧಿಸಿದೆ. ಈತ ದುಬೈನಿಂದ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಾಗ ಬಂಧನವಾಗಿದೆ.

NIA ವಿಶೇಷ ನ್ಯಾಯಾಲಯ ಈತನ ವಿರುದ್ಧ ಬಂಧನ ವಾರಂಟ್ ಮತ್ತು ಲುಕ್ಔಟ್ ಸುತ್ತೋಲೆ (ಎಲ್ಒಸಿ) ಜಾರಿಮಾಡಿತ್ತು. ಪಿಎಫ್ಐ ತರಬೇತಿ ಪಡೆದ ಈ ವ್ಯಕ್ತಿ, ಆರ್ಥಿಕ ನೆರವು ಮತ್ತು ಚಟುವಟಿಕೆಗಳಿಗೆ ಮಾರ್ಗಸೂಚಿಯಾಗಿದ್ದ ಎಂದು ತಿಳಿದುಬಂದಿದೆ.

ಎನ್ಐಎ ಪ್ರಕಾರ, ಈ ಹಣವನ್ನು ನಿಷೇಧಿತ ಸಂಘಟನೆಯ ಅಪರಾಧ ಚಟುವಟಿಕೆಗಳನ್ನು ಉತ್ತೇಜಿಸಲು ಬಳಸಲಾಗುತ್ತಿತ್ತು. ಕರ್ನಾಟಕ ಮತ್ತು ಕೇರಳದ ತಂಡಗಳ ಮೂಲಕ ಬಿಹಾರಕ್ಕೆ ಹಣ ರವಾನಿಸಲಾಗಿತ್ತು.

2022ರಲ್ಲಿ ಬಿಹಾರದ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ಪಿಎಫ್ಐ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣವನ್ನು ಎನ್ಐಎಗೆ ವಹಿಸಲಾಗಿತ್ತು. ಪಿಎಫ್ಐ ಸಂಘಟನೆಯು ದೇಶದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯಾಗುವ ರೀತಿಯಲ್ಲಿ ಚಟುವಟಿಕೆ ನಡೆಸುತ್ತಿದ್ದು, 2047ರ ವೇಳೆಗೆ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿರುವುದಾಗಿ ಆರೋಪಿಸಲಾಗಿದೆ.

ಈ ಪ್ರಕರಣದಲ್ಲಿ ಈಗಾಗಲೇ 17 ಮಂದಿಯನ್ನು ಬಂಧಿಸಲಾಗಿತ್ತು. ಮೊಹಮ್ಮದ್ ಸಜ್ಜದ್ ಆಲಂ 18ನೇ ಆರೋಪಿಯಾಗಿದ್ದು, ತನಿಖೆ ಮುಂದುವರೆದಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version