Delhi:ದೆಹಲಿಯ (Delhi) ವಿವಿಧ ಶಾಲೆಗಳಿಗೆ 23 ಬಾಂಬ್ ಬೆದರಿಕೆ ಇ-ಮೇಲ್‌ಗಳನ್ನು (Bomb threat email) ಕಳುಹಿಸಿದ್ದಕ್ಕಾಗಿ ದೆಹಲಿ ಪೊಲೀಸರು 12ನೇ ತರಗತಿಯ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ಈ ವಿದ್ಯಾರ್ಥಿ ತಾನು ಈ ಮೊದಲು ಕೂಡ ಇದೇ ರೀತಿಯ ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಘಟನೆಗಳಿಂದ ಉಂಟಾದ ಆತಂಕದ ಹಿನ್ನೆಲೆಯಲ್ಲಿ, ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗೆ ಬಾಂಬ್ ಬೆದರಿಕೆ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ದೆಹಲಿ ಪೊಲೀಸರು ವಿಶೇಷ ತರಬೇತಿಯನ್ನು ಒದಗಿಸಿದ್ದಾರೆ.
ಮದರ್ಸ್ ಇಂಟರ್ನ್ಯಾಶನಲ್, ಮಾಡರ್ನ್ ಸ್ಕೂಲ್, ಜಿಡಿ ಗೋಯೆಂಕಾ, ದೆಹಲಿ ಪಬ್ಲಿಕ್ ಸ್ಕೂಲ್ ಸೇರಿದಂತೆ ಹಲವು ಶಾಲೆಗಳ ಪ್ರಾಂಶುಪಾಲರು ಈ ಇ-ಮೇಲ್ ಬೆದರಿಕೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಚಳಿಗಾಲದ ರಜೆಯ ಸಂದರ್ಭದಲ್ಲಿ ಕೆಲವು ಶಾಲೆಗಳು ಮುಚ್ಚಿದ್ದರೂ, ಇ-ಮೇಲ್ ಬೆದರಿಕೆ ಬಿದ್ದಿದ್ದು ವಿದ್ಯಾರ್ಥಿಗಳು ಆವರಣದಲ್ಲಿರಲಿಲ್ಲ ಎಂದು ವರದಿಯಾಗಿದೆ. ಈ ಬೆದರಿಕೆ ಇ-ಮೇಲ್‌ಗಳ ಹಿಂದಿರುವ ಕಾರಣವನ್ನು ಹೆಚ್ಚಿನ ತನಿಖೆ ಮೂಲಕ ತಿಳಿಯಲಾಗುತ್ತಿದೆ.