2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಡಿದ ಕೆಎಸ್ ಭರತ್, (KS Bharath) ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಯಾವುದೇ ತಂಡದ ಗಮನ ಸೆಳೆಯಲಿಲ್ಲ. ಹೀಗಾಗಿ ಅವರು ವಿದೇಶಿ ಕ್ರಿಕೆಟ್ ಕ್ಲಬ್ ಪರ ಆಡಲು ನಿರ್ಧರಿಸಿದ್ದಾರೆ.
ಇಂಗ್ಲೆಂಡ್ ನ ಸರ್ರೆ ಚಾಂಪಿಯನ್ಶಿಪ್ (Surrey Championship tournament) ಟೂರ್ನಿಯ ಡಲ್ವಿಚ್ ಕ್ರಿಕೆಟ್ ಕ್ಲಬ್ ಪರ ಭರತ್ ಒಪ್ಪಂದ ಮಾಡಿಕೊಂಡಿದ್ದು, ಏಪ್ರಿಲ್ ನಲ್ಲಿ ನಡೆಯುವ ಟೂರ್ನಿಗೆ ತೆರಳಲಿದ್ದಾರೆ. ಇಂಗ್ಲೆಂಡ್ನ ಪಿಚ್ಗಳು ಭಾರತೀಯ ಪಿಚ್ ಗಳಿಗಿಂತ ಭಿನ್ನವಾಗಿರುವುದರಿಂದ, ಹೊಸ ಅನುಭವಗಳನ್ನು ಪಡೆಯಲು ಭರತ್ ಈ ಅವಕಾಶವನ್ನು ಬಳಸಿಕೊಳ್ಳಲಿದ್ದಾರೆ.
ಐಪಿಎಲ್ ಬಳಿಕ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಈಗಾಗಲೇ ಭರತ್ ಭಾರತದ ಪರ 7 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ, ಆದರೆ ಅವರ ಹಿನ್ನಿದಿನ ಪ್ರದರ್ಶನ ಪರಿಣಾಮ ಆಯ್ಕೆಗಾರರು ಧ್ರುವ್ ಜುರೇಲ್ ಗೆ ಅವಕಾಶ ನೀಡಿದ್ದರು. ಇಂಗ್ಲೆಂಡ್ನಲ್ಲಿನ ಉತ್ತಮ ಪ್ರದರ್ಶನದ ಮೂಲಕ ಮತ್ತೆ ಟೀಮ್ ಇಂಡಿಯಾದ ಕದ ತಟ್ಟಲು ಭರತ್ ಯತ್ನಿಸುತ್ತಿದ್ದಾರೆ.
ಕೆಎಸ್ ಭರತ್ IPL ಪ್ರದರ್ಶನ
- RCB (2021): 8 ಪಂದ್ಯಗಳಲ್ಲಿ 191 ರನ್ (1 ಅರ್ಧಶತಕ)
- Delhi Capitals (2022): 2 ಪಂದ್ಯಗಳಲ್ಲಿ 8 ರನ್
- Gujarat Titans (2023): ಆಡಲು ಅವಕಾಶ ಸಿಗಲಿಲ್ಲ
- IPL 2024 ಹರಾಜು: ಯಾವುದೇ ತಂಡ ಖರೀದಿಸಿಲ್ಲ
ಭಾರತ ತಂಡದಲ್ಲಿ ಮರುಪ್ರವೇಶದ ಕನಸು ಹೊಂದಿರುವ ಭರತ್, ವಿದೇಶಿ ಕ್ರಿಕೆಟ್ ಮೂಲಕ ಕಂನ್ಫಿಡೆನ್ಸ್ ವೃದ್ಧಿಸಿಕೊಂಡು, ಮತ್ತೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗುವ ನಿರೀಕ್ಷೆಯಲ್ಲಿದ್ದಾರೆ.