Hubballi: ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) UPI ಮೂಲಕ ಹಣ ಪಾವತಿಸುವ ಸೌಲಭ್ಯವಿಲ್ಲದ ಕಾರಣ ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಿದ್ದಾರೆ. Onlineಪಾವತಿ ವ್ಯವಸ್ಥೆ ಅವಲಂಬಿಸಿರುವವರು ಕಚೇರಿಗಳಲ್ಲಿ ನಗದು ಪಾವತಿ ಮಾಡಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.
ರಾಜ್ಯದಲ್ಲಿ 66 RTO ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ವಾಹನ ಚಾಲನಾ ಪರವಾನಗಿ, ನವೀಕರಣ, ನೋಂದಣಿ, ನೋಂದಣಿ ಸಂಖ್ಯೆ ಹಂಚಿಕೆ, ಮತ್ತು ದಂಡ ಪಾವತಿಯನ್ನು ಒಳಗೊಂಡ 30ಕ್ಕೂ ಹೆಚ್ಚು ಸೇವೆಗಳು online ಮೂಲಕ ಲಭ್ಯವಿವೆ. ಆದರೆ, ಕಚೇರಿಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ಇಲ್ಲದಿರುವುದರಿಂದ ಜನರು ಪರದಾಡುತ್ತಿದ್ದಾರೆ.
RTO ಕಚೇರಿಗಳು ರಾಜ್ಯ ಸರ್ಕಾರದ ಪ್ರಮುಖ ಆದಾಯದ ಮೂಲವಾಗಿದ್ದು, ಪ್ರತಿದಿನ ಸಾವಿರಾರು ಜನರು ಸೇವೆ ಪಡೆಯಲು ಬರುತ್ತಾರೆ. ಹೆಚ್ಚಿನ ಕಚೇರಿಗಳು ನಗರ ಹೊರವಲಯದಲ್ಲಿರುವುದರಿಂದ ಬ್ಯಾಂಕ್ ಅಥವಾ ಎಟಿಎಂ ಸೌಲಭ್ಯಗಳು ಲಭ್ಯವಿಲ್ಲ. ಇದರಿಂದ ಸಾರ್ವಜನಿಕರು ನಗದು ವ್ಯವಸ್ಥೆ ಮಾಡುವುದು ಕಷ್ಟವಾಗುತ್ತಿದೆ.
ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಅವರು, “ಸಾರ್ವಜನಿಕರು online ಮೂಲಕ ತೆರಿಗೆ, ದಂಡ, ಹಾಗೂ ಶುಲ್ಕ ಪಾವತಿಸಬಹುದು. ಆದರೆ, ಯುಪಿಐ ಪಾವತಿ ಸೌಲಭ್ಯಕ್ಕೆ ಸರ್ಕಾರದ ಅನುಮತಿ ಇಲ್ಲ. ಭವಿಷ್ಯದಲ್ಲಿ ಈ ಸೌಲಭ್ಯ ಒದಗಿಸುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.
ಸರಕಾರದಿಂದ ಯುಪಿಐ ಪಾವತಿ ಸೌಲಭ್ಯ ಒದಗಿಸಲಾಗಿದೆಯಾ? ಎಂಬ ಪ್ರಶ್ನೆಗೆ, ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.