ನಾವು Omicron ನಿಂದ Covid-19 ಸಾಂಕ್ರಾಮಿಕ ರೋಗದ ಕೆಟ್ಟ ಹಂತವನ್ನು ಪ್ರವೇಶಿಸಬಹುದು ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ (Microsoft Co-Founder Bill Gates) ಎಚ್ಚರಿಸಿದ್ದಾರೆ.
ವಿಶ್ವಾದ್ಯಂತ ಓಮಿಕ್ರಾನ್‌ನಲ್ಲಿನ ಪ್ರಸ್ತುತ ಏರಿಕೆ ಕಂಡಿರುವ ಆತಂಕಕಾರಿ ಸ್ವಭಾವದ ಬಗ್ಗೆ ಸಾರ್ವಜನಿಕರನ್ನು ಎಚ್ಚರಿಸುವ ನಿಟ್ಟಿನಲ್ಲಿ ಟ್ವೀಟ್‌ಗಳನ್ನು (Tweet) ಮಾಡಿರುವ ಬಿಲ್ ಗೇಟ್ಸ್, ತಮ್ಮ ಹೆಚ್ಚಿನ ರಜಾದಿನದ ಯೋಜನೆಗಳನ್ನು ಅವರು ರದ್ದುಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
“ಜನ ಜೀವನವು ಇನ್ನೇನು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂದು ತೋರುತ್ತಿರುವಾಗ, ಸಾಂಕ್ರಾಮಿಕ ರೋಗದ ನಾವು ಕೆಟ್ಟ ಭಾಗವನ್ನು ಪ್ರವೇಶಿಸಬಹುದು” ಎಂದು ಗೇಟ್ಸ್ ಟ್ವಿಟರ್ (Twitter) ನಲ್ಲಿ Omicron ರೂಪಾಂತರದ ಬಗ್ಗೆ ಹೇಳಿದ್ದಾರೆ.
“ಓಮಿಕ್ರಾನ್ ರೂಪಾಂತರದ ಬಗ್ಗೆ ಅನೇಕ ತಿಳಿಯದ ವಿಷಯಗಳಿವೆ. ಇದು ಡೆಲ್ಟಾದ ಅರ್ಧದಷ್ಟು ತೀವ್ರವಾಗಿದ್ದರೂ ಸಹ, ಇದು ನಾವು ಇಲ್ಲಿಯವರೆಗೆ ನೋಡಿದ ಅತ್ಯಂತ ಕೆಟ್ಟ ರೂಪವಾಗಿದೆ ಏಕೆಂದರೆ ಅದು ತುಂಬಾ ಸಾಂಕ್ರಾಮಿಕವಾಗಿದೆ” ಎಂದು ತಜ್ಞರು ಹೇಳಿದ್ದನ್ನು ಗೇಟ್ಸ್ ಪುನರುಚ್ಚರಿಸಿದ್ದಾರೆ.
“ಇಲ್ಲಿ ಒಳ್ಳೆಯ ಸುದ್ದಿ ಏನಾದರು ಇದ್ದರೆ, ಓಮಿಕ್ರಾನ್ ಎಷ್ಟು ಬೇಗನೆ ಚಲಿಸುತ್ತದೆ ಎಂದರೆ ಅದು ಒಮ್ಮೆ ದೇಶದಲ್ಲಿ ಪ್ರಬಲವಾದರೆ, ಅಲ್ಲಿ ಅಲೆಯು 3 ತಿಂಗಳಿಗಿಂತ ಕಡಿಮೆ ಇರುತ್ತದೆ. ಆ ಕೆಲವು ತಿಂಗಳುಗಳು ಕೆಟ್ಟದಾಗಿರಬಹುದು, ಆದರೆ ನಾವು ಸರಿಯಾದ ಕ್ರಮಗಳನ್ನು ತೆಗೆದುಕೊಂಡರೆ, ಸಾಂಕ್ರಾಮಿಕ ರೋಗವು 2022 ರಲ್ಲಿ ಕೊನೆಗೊಳ್ಳಬಹುದು ಎಂದು ನಾನು ಇನ್ನೂ ನಂಬುತ್ತೇನೆ.” ಎಂದು ತಿಳಿಸಿದ್ದಾರೆ.
ಜನರಿಗೆ ಮುಖಗವಸುಳನ್ನು ಧರಿಸುವುದನ್ನು ಮುಂದುವರಿಸಲು ಪ್ರೋತ್ಸಾಹಿಸಿತ್ತಾ, ಒಳಾಂಗಣಗಳಲ್ಲಿ ಜನರು ಒಟ್ಟಾಗಿ ಸೇರುವುದನ್ನು ತಪ್ಪಿಸಿ, ಪ್ರತಿಯೊಬ್ಬರೂ ಲಸಿಕೆಯನ್ನು ಪಡೆಯಲು ಸೂಚಿಸಿದ್ದಾರೆ. ಲಸಿಕೆ ಹಾಕಿದ ಜನರಲ್ಲಿ Break-Through ಪ್ರಕರಣಗಳನ್ನು ಕಂಡುಬಂದರೂ ಲಸಿಕೆಗಳು ಜನರನ್ನು ಕೋವಿಡ್ ನ ಕೆಟ್ಟ ಪರಿಣಾಮಗಳಿಂದ ರಕ್ಷಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.