back to top
25.2 C
Bengaluru
Saturday, July 19, 2025
HomeTechnologyGadgetsಭಾರತದಲ್ಲಿ OPPO Find X8 Pro ಬಿಡುಗಡೆ

ಭಾರತದಲ್ಲಿ OPPO Find X8 Pro ಬಿಡುಗಡೆ

- Advertisement -
- Advertisement -

ಜನಪ್ರಿಯ ಒಪ್ಪೋ ಸಂಸ್ಥೆಯ ಬಹು ನಿರೀಕ್ಷಿತ ಫೈಂಡ್ X8 ಸರಣಿ ದೇಶಿಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದೆ. ಈ ಸರಣಿಯ ಪ್ರಮುಖ ಫೋನ್ OPPO Find X8 Pro ಬಳಕೆದಾರರಲ್ಲಿ ವಿಶೇಷ ಗಮನ ಸೆಳೆದಿದೆ.

ವೈಶಿಷ್ಟ್ಯಗಳು

  • ಪ್ರೊಸೆಸರ್ ಮತ್ತು ಬ್ಯಾಟರಿ: ಮೀಡಿಯಾ ಟೆಕ್ ಡೈಮೆನ್ಸಿಟಿ 9400 SoC ಪ್ರೊಸೆಸರ್. 5910mAh ಬ್ಯಾಟರಿ ಬ್ಯಾಕ್ಅಪ್, 80W SuperVOOC ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ.
  • ಡಿಸ್ಪ್ಲೇ: 6.78 ಇಂಚಿನ AMOLED ಸ್ಕ್ರೀನ್. 2780×1264 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, 4500 nits ಗರಿಷ್ಠ brightness.
  • ಕ್ಯಾಮೆರಾ: ಹಿಂಭಾಗದಲ್ಲಿ ತ್ರಿಪಲ್ ಕ್ಯಾಮೆರಾ ಸೆಟ್‌ಅಪ್ (ಮೂರು 50MP ಸೆನ್ಸಾರ್). ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ. OIS, 120X ಡಿಜಿಟಲ್ ಜೂಮ್, ಹ್ಯಾಸೆಲ್‌ಬ್ಲಾಡ್ Portrait ಫೀಚರ್.

12GB/16GB RAM, 256GB/512GB/1TB ಸ್ಟೋರೇಜ್ ಆಯ್ಕೆ. ಆಂಡ್ರಾಯ್ಡ್ 15 ಆಧಾರಿತ ಸಾಫ್ಟ್‌ವೇರ್. 16GB + 512GB ವೇರಿಯಂಟ್ ಬೆಲೆ ₹99,999. ಸ್ಪೇಸ್ ಬ್ಲಾಕ್ ಮತ್ತು ಪರ್ಲ್ ವೈಟ್ ಬಣ್ಣಗಳಲ್ಲಿ ಲಭ್ಯ.

ಒಪ್ಪೋ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಇ ಕಾಮರ್ಸ್‌ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಇಂದಿನಿಂದ ಪ್ರಿ-ಆರ್ಡರ್‌ಗೆ ಲಭ್ಯ ಇರುತ್ತವೆ. ಇದೇ ಡಿಸೆಂಬರ್ 3 ರಿಂದ ಮಾರಾಟ ಶುರುವಾಗಲಿದೆ. ಈ ಹೊಸ ಸ್ಮಾರ್ಟ್ಫೋನ್, ಪ್ರೀಮಿಯಂ ಗ್ರಾಹಕರಿಗೆ ತೃಪ್ತಿ ನೀಡಲು ಸಿದ್ಧವಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page