OPPO ಎರಡು ಸೊಗಸಾದ ಫೋನುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಬಹು ನಿರೀಕ್ಷಿತ OPPO Reno 13 ಸರಣಿ (5G) ಮಾರುಕಟ್ಟೆಗೆ ತೆರೆದಿಡಲಾಗುತ್ತದೆ. OPPO Reno 13 ಮತ್ತು OPPO Reno 13 Pro ಫೋನುಗಳು ಬಿಡುಗಡೆಯಾಗಲಿವೆ.
ಫೋನ್ ಡಿಸೈನ್ ಮತ್ತು ವೈಶಿಷ್ಟ್ಯಗಳು
OPPO Reno 13 ಸರಣಿ ಪ್ರತಿ ಫೋನಿಗೂ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. OPPO Reno 13 Pro ಮೊಬೈಲ್ 6.83 ಇಂಚಿನ AMOLED ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು MediaTek Dimensity 8350 ಪ್ರೊಸೆಸರ್ ನಿಂದ ಚಲಿಸುತ್ತದೆ ಮತ್ತು Android 15 ಆಧಾರಿತ ColorOS 15.0 ಹೊಂದಿದೆ. OPPO Reno 13 Proನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್: OPPO Reno 13 Pro ಫೋನಿನಲ್ಲಿ 5,800mAh ಬ್ಯಾಟರಿ ಇದೆ ಮತ್ತು 80W ವೈರ್ಡ್ ಫಾಸ್ಟ್ ಚಾರ್ಜಿಂಗ್, 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ. OPPO Reno 13 ಫೋನಿನಲ್ಲಿ 5,600mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೌಲಭ್ಯವು ಲಭ್ಯವಿದೆ.
ಬೆಲೆ: OPPO Reno 13 ಮತ್ತು OPPO Reno 13 Pro ಫೋನುಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. OPPO Reno 13 ಮೊಬೈಲ್ 12GB RAM ಮತ್ತು 16GB RAM ಆಯ್ಕೆಗಳಲ್ಲಿ 44,190 ರೂ. ದರದಲ್ಲಿ ಲಭ್ಯವಾಗಿದೆ. ಭಾರತದಲ್ಲಿ 29,999 ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. OPPO Reno 13 Pro ಮೊಬೈಲ್ 12GB RAM ಮತ್ತು 16GB RAM ಆಯ್ಕೆಗಳಲ್ಲಿ 52,350 ರೂ. ದರದಲ್ಲಿ ಲಭ್ಯವಾಗಿದೆ. ಭಾರತದಲ್ಲಿ 39,999 ರೂ. ಬೆಲೆಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.