Pro Kabaddi 2021 – ಆವೃತ್ತಿ 8 ರ ಜನವರಿ 15, 2022 ರಂದು ಮೂರು ಪಂದ್ಯಗಳೊಂದಿಗೆ ಮುಂದುವರೆಯಿತು. ಕಳೆದ ಋತುವಿನ ರನ್ನರ್ ಅಪ್ ದಬಾಂಗ್ ಡೆಲ್ಲಿ K.C. (Dabang Delhi K.C.) ಮತ್ತು ಹರಿಯಾಣ ಸ್ಟೀಲರ್ಸ್ (Haryana Steelers) ನಡುವಿನ ಘರ್ಷಣೆಯೊಂದಿಗೆ ದಿನದ ಮೊದಲ ಪಂದ್ಯ ಪ್ರಾರಂಭವಾಯಿತು. ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ (Telugu Titans) ಈ ಋತುವಿನಲ್ಲಿ ಮೊದಲ ಗೆಲುವು ದಾಖಲಿಸುವ ಗುರಿಯೊಂದಿಗೆ ಯುಪಿ ಯೋಧಾ (UP Yoddha) ವಿರುದ್ಧ ಹೋರಾಡಿತು. ಮೂರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ (Bengal Warriors) ಮತ್ತು ಎರಡನೇ ಸೀಸನ್ ಚಾಂಪಿಯನ್ ಯು ಮುಂಬಾ (U Mumba) ನಡುವಿನ ಘರ್ಷಣೆಯೊಂದಿಗೆ ರಾತ್ರಿ ಕೊನೆಗೊಂಡಿತು.
ಪಂದ್ಯ 1: Haryana Steelers Vs Dabang Delhi K.C.

ದಿನದ ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ (Haryana Steelers) ವಿರುದ್ಧ 28-25 ಗೆಲುವಿನೊಂದಿಗೆ ದಬಾಂಗ್ ದೆಹಲಿ K.C. (Dabang Delhi K.C.) ತನ್ನ ಎರಡು ಪಂದ್ಯಗಳ ಸೋಲಿನ ಸರಣಿಯನ್ನು ಮುರಿಯಿತು. ದಬಾಂಗ್ ದೆಹಲಿ ಪರ ವಿಜಯ್ 11 ಅಂಕಗಳನ್ನು ಪಡೆದು ಮಿಂಚಿದರು. ನವೀನ್ ಕುಮಾರ್ 5 ರೇಡ್ ಪಾಯಿಂಟ್‌ಗಳೊಂದಿಗೆ ಉತ್ತಮ ಬೆಂಬಲ ನೀಡಿದರು.
ಹರಿಯಾಣ ಸ್ಟೀಲರ್ಸ್ ಪರ ಯಾವುದೇ ಆಟಗಾರ 5 ಕ್ಕಿಂತ ಹೆಚ್ಚು ಅಂಕ ಗಳಿಸಲು ಸಾಧ್ಯವಾಗಲಿಲ್ಲ. ಆಶಿಶ್ ಮತ್ತು ಮೀಟೂ ತಲಾ 5 ಪಾಯಿಂಟ್‌ಗಳನ್ನು ಗಳಿಸಿದರೆ, ನಾಯಕ ವಿಕಾಸ್ ಕಂಡೋಲಾ 3 ರೇಡ್ ಪಾಯಿಂಟ್‌ಗಳನ್ನು ಗಳಿಸಿದರು.
39 ನೇ ನಿಮಿಷದಲ್ಲಿ ಎರಡೂ ತಂಡಗಳು ಸಮಾನ ಅಂಕಗಳನ್ನು ಹೊಂದಿದ್ದವು, ವಿಜಯ್ ಅವರ ಸೂಪರ್ ರೇಡ್ ನಿಂದ ದಬಾಂಗ್ ದೆಹಲಿ 3 ಪಾಯಿಂಟ್‌ಗಳಿಂದ ಗೆಲುವು ಸಾಧಿಸಿತು.
ಪಂದ್ಯ 2: UP Yoddha Vs Telugu Titans

ದಿನದ ಎರಡನೇ ಪಂದ್ಯದಲ್ಲಿ ಯುಪಿ ಯೋದ್ಧ (UP Yoddha), ತೆಲುಗು ಟೈಟಾನ್ಸ್ (Telugu Titans) ಅನ್ನು 39-33 ಅಂಕಗಳ ಅಂತರದಿಂದ ಸೋಲಿಸಿತು. ಸಿದ್ಧಾರ್ಥ್ ದೇಸಾಯಿ ಗಾಯದ ಕಾರಣ ಟೈಟಾನ್ಸ್ ಪರ ಆಡಲಾಗಲಿಲ್ಲ.
ಯುಪಿ ಯೋಧಾ ಪರ ಪರ್ದೀಪ್ ನರ್ವಾಲ್ ಸೂಪರ್ 10 ರೊಂದಿಗೆ ಮಿಂಚಿದರು, ನಾಯಕ ನಿತೇಶ್ ಕುಮಾರ್ ಹೈ 5 ದಾಖಲಿಸಿದರು. ತೆಲುಗು ಟೈಟಾನ್ಸ್ ಪರ ಅಂಕಿತ್ ಬೇನಿವಾಲ್ ಮತ್ತು ರಜನೀಶ್ ತಲಾ 9 ಅಂಕಗಳನ್ನು ಗಳಿಸಿದರು.
ಪಂದ್ಯ 3: U Mumba Vs Bengal Warriors

ದಿನದ ಮೂರನೇ ರೋಚಕ ಪಂದ್ಯದಲ್ಲಿ ಯು ಮುಂಬಾ (U Mumba) ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ (Bengal Warriors) ವಿರುದ್ಧ 32-32 ಡ್ರಾ ಸಾಧಿಸಿದರು.
ವಾರಿಯರ್ಸ್ ಪರ ನಾಯಕ ಮಣಿಂದರ್ ಸಿಂಗ್ 17 ರೇಡ್ ಪಾಯಿಂಟ್‌ಗಳನ್ನು ಗಳಿಸಿದರು.
ಯು ಮುಂಬಾ ಪರ ತಂಡದ ಉಪನಾಯಕ ಅಭಿಷೇಕ್ ಸಿಂಗ್ 9 ಅಂಕ ಗಳಿಸಿದರು. ರಾಹುಲ್ ಸೇಠಪಾಲ್ 7 ಅಂಕಗಳನ್ನು, ವಿ. ಅಜಿತ್ ಕುಮಾರ್ 5 ಅಂಕಗಗಳನ್ನು ಪಡೆದರು.
PKL 2021 – January 15, 2022 Score Card
PKL 2021 ರ January 15, 2022 ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ

Image: Pro Kabaddi