Pro Kabaddi 2021 – ಆವೃತ್ತಿ 8, ಜನವರಿ 20, 2022 ಗುರುವಾರದ ರಾತ್ರಿಯ ಆರಂಭಿಕ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ (Gujarat Giants), ತಮಿಳ್ ತಲೈವಾಸ್ (Tamil Thalaivas) ವಿರುದ್ಧ ಹೋರಾಡಿತು. ಎರಡನೇ ಪಂದ್ಯದಲ್ಲಿ ಸೀಸನ್ 6 ರ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) ಮತ್ತು ಸೀಸನ್ 7 ವಿಜೇತ ಬೆಂಗಾಲ್ ವಾರಿಯರ್ಸ್ (Bengal Warriors) ಮುಖಾಮುಖಿಯಾದರು.
ಪಂದ್ಯ 1: Tamil Thalaivas Vs Gujarat Giants

ದಿನದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ (Tamil Thalaivas) ವಿರುದ್ಧ 37-35 ಅಂಕಗಳ ಅಂತರದಲ್ಲಿ ಜಯ ಗಳಿಸಿ ಗುಜರಾತ್ ಜೈಂಟ್ಸ್ (Gujarat Giants) ಗೆಲುವಿನ ಹಾದಿಗೆ ಮರಳಿತು.
ಪ್ರದೀಪ್ ಕುಮಾರ್ ಅವರ ಕೊನೆಯ ನಿಮಿಷದ ಸೂಪರ್ ರೇಡ್ ಜೈಂಟ್ಸ್, ತಲೈವಾಸ್ ವಿರುದ್ಧ ಗೆಲುವನ್ನು ಸಾದಿಸಲು ಕಾರಣವಾಯಿತು.
ಜೈಂಟ್ಸ್ ಪರ ಮಹೇಂದ್ರ ಗಣೇಶ್ 9 ಅಂಕಗಳನ್ನು ಗಳಿಸಿದರು. ಸುನಿಲ್ ಕುಮಾರ್ 5 ಅಂಕಗಳು, ರಾಕೇಶ್ ನರ್ವಾಲ್ 6 ಅಂಕಗಳನ್ನು ಪಡೆದರು.
ತಮಿಳ್ ತಲೈವಾಸ್ ಪರ ಮಂಜೀತ್ ಸೂಪರ್ 10, ಸಾಗರ್ ಹೈ 5 ಅನ್ನು ಗಳಿಸಿದರು.
ಪಂದ್ಯ 2: Bengaluru Bulls Vs Bengal Warriors

ದಿನದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ (Bengaluru Bulls) ವಿರುದ್ಧ ಒಂದು ಅಂಕದ ಅಂತರದಲ್ಲಿ ಬೆಂಗಾಲ್ ವಾರಿಯರ್ಸ್ (Bengal Warriors) ಗೆಲುವನ್ನು ಸಾಧಿಸಿತು.
ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಸೆಹ್ರಾವತ್ 13 ಅಂಕಗಳನ್ನು ಪಡೆದರು
ಬೆಂಗಾಲ್ ವಾರಿಯರ್ಸ್ ಪರ ಮಣಿಂದರ್ ಸಿಂಗ್ 9 ಅಂಕಗಳನ್ನು ಪಡೆದರು. ಸುಕೇಶ್ ಹೆಗ್ಡೆ 7 ರೈಡ್ ಪಾಯಿಂಟ್‌ಳನ್ನು, ಮೊಹಮ್ಮದ್ ನಬಿಬಕ್ಷ್ 2 ರೇಡ್ ಪಾಯಿಂಟ್ ಮತ್ತು 4 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದರು.
PKL 2021 – January 20, 2022 Score Card
PKL 2021 ರ January 20, 2022 ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ

Image: Pro Kabaddi