Pro Kabaddi 2021 – ಆವೃತ್ತಿ 8 ರ ಜನವರಿ 9, 2022 ರಂದು ಎರಡು ಏಕಪಕ್ಷೀಯ ಪಂದ್ಯಗಳಿಗೆ ಪ್ರೇಕ್ಷಕರು ಸಾಕ್ಷಿಯಾದರು. ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್ (Puneri Paltan) 12 ಅಂಕಗಳಿಂದ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ (Bengal Warriors) ತಂಡವನ್ನು ಮಣಿಸಿತು. ಎರಡನೇ ಪಂದ್ಯದಲ್ಲಿ PKL ಆರನೇ ಆವೃತ್ತಿಯ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) ವಿರುದ್ಧ ಯುಪಿ ಯೋಧಾ (UP Yoddha) 15 ಪಾಯಿಂಟ್‌ಗಳ ಬೃಹತ್ ವಿಜಯವನ್ನು ದಾಖಲಿಸಿತು.
ಪಂದ್ಯ 1: Puneri Paltan Vs Bengal Warriors

ದಿನದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್ (Puneri Paltan) 12 ಅಂಕಗಳ ( 39-27) ಅಂತರದಿಂದ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ (Bengal Warriors) ತಂಡವನ್ನು ಸೋಲಿಸಿತು. ಪುಣೇರಿ ಪಲ್ಟನ್ ಪರ ಆಲ್‌ರೌಂಡರ್ ಅಸ್ಲಾಮ್ ಇನಾಮದಾರ್ (Aslam Inamdar) 17 ಅಂಕಗಳನ್ನು ಗಳಿಸುವ ಮೂಲಕ ಪಂದ್ಯದ ಸ್ಟಾರ್ ಆದರು. ಅಭಿನೇಶ್ ನಡರಾಜನ್ (Abinesh Nadarajan) High 5, ನಿತಿನ್ ತೋಮರ್ (Nitin Tomar) 3 ಅಂಕಗಳನ್ನು ಗಳಿಸಿದರು.
ಬೆಂಗಾಲ್ ವಾರಿಯರ್ಸ್ ಪರ ನಾಯಕ ಮಣಿಂದರ್ ಸಿಂಗ್ (Maninder Singh) Super 10, ರೈಡರ್ ಆಕಾಶ್ ಪಿಕಾಲ್ಮುಂಡೆ (Akash Pikalmunde) 8 ರೇಡ್ ಅಂಕಗಳನ್ನು ಗಳಿಸಿದರು.
ಪಂದ್ಯ 2: Bengaluru Bulls Vs UP Yoddha

ದಿನದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ (Bengaluru Bulls) ವಿರುದ್ಧ 22 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಯುಪಿ ಯೋಧಾ (UP Yoddha) ತಂಡವು ಒಂದೇ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಅತಿ ಹೆಚ್ಚು ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ ದಾಖಲೆಯನ್ನು ನಿರ್ಮಿಸಿತು. ರೋಮಾಂಚಕ ಪಂದ್ಯದಲ್ಲಿ ಯುಪಿ ಯೋಧಾ, ಬೆಂಗಳೂರು ಬುಲ್ಸ್ ಅನ್ನು 17 ಅಂಕಗಳ (42-27) ಅಂತರದಿಂದ ಸೋಲಿಸಿತು.
ಯುಪಿ ಯೋಧಾ ಪರ ರೈಡರ್‌ಗಳಾದ ಶ್ರೀಕಾಂತ್ ಜಾಧವ್ (Shrikant Jadhav), ಸುರೇಂದರ್ ಗಿಲ್ (Surender Gill) ಮತ್ತು ಮೊಹಮ್ಮದ್ ತಘಿ ಪೈನ್ ಮಹಾಲೀ (Mohammad Taghi Paein Mahali) ತಲಾ ಏಳು ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದರು. ಗುರ್ದೀಪ್ (Gurdeep) ನಾಲ್ಕು ಪಾಯಿಂಟ್‌ಗಳನ್ನು, ಶ್ರೀಕಾಂತ್ ಜಾಧವ್ (Shrikant Jadhav) 12 ಅಂಕಗಳನ್ನು ಗಳಿಸಿದರು.
ಬೆಂಗಳೂರು ಬುಲ್ಸ್ ಪರ ಭರತ್ (Bharat) 11 ಅಂಕ ಗಳಿಸಿದರು.
PKL 2021 – January 9, 2022 Score Card
PKL 2021 ರ January 9, 2022 ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ
