Ramanagara : ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ಅಕ್ಕೂರು ಗ್ರಾಮ ಪಂಚಾಯಿತಿಯ (Kotagal Hobli Akkuru Grama Panchayat) ಹಿಂದಿನ ಉಪಾಧ್ಯಕ್ಷೆ ಪುಷ್ಪಲತಾ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆಯಲ್ಲಿ (Election) ನೂತನ ಉಪಾಧ್ಯಕ್ಷೆಯಾಗಿ ವಿರೂಪಸಂದ್ರ ಗ್ರಾಮ ಸದಸ್ಯೆ ಬಿ.ಆರ್. ಮಂಜುಳಾ ಅವಿರೋಧವಾಗಿ ಆಯ್ಕೆಯಾಗಿದಾರೆ ಎಂದು ಚುನಾವಣಾ ಅಧಿಕಾರಿ ತಾಪಂ EO ಶಿವಕುಮಾರ್ ಘೋಷಿಸಿದರು.
ಅಕ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಪಿ. ಹರೀಶ್, ಪರಮಶಿವಯ್ಯ, ಪುಷ್ಪಲತಾ, ಗೌರಮ್ಮ, ಬೋರಯ್ಯ, ಶಿವಲಿಂಗಯ್ಯ, ಶಿವಹನುಮಯ್ಯ ಪಿಡಿಒ ಮಹೇಶ್ವರಯ್ಯ ಮತ್ತಿತರರು ಉಪಸ್ಥಿತರಿದ್ದರು.