Tuesday, October 4, 2022
HomeKarnatakaRamanagaraದಾಖಲೆ ಮೊತ್ತಕ್ಕೆ ರೇಷ್ಮೆ ಗೂಡು ಮಾರಾಟ

ದಾಖಲೆ ಮೊತ್ತಕ್ಕೆ ರೇಷ್ಮೆ ಗೂಡು ಮಾರಾಟ

Ramanagara : ಬುಧವಾರ ರಾಮನಗರ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ (Silk Cocoon Market) ಕೆಜಿ ಗೂಡು ಗರಿಷ್ಟ 1043 ರೂಪಾಯಿಗಳಿಗೆ ಹರಾಜಾಗಿದ್ದು, ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ರೇಷ್ಮೆಗೂಡಿನ ದರವು ನಾಲ್ಕು ಅಂಕಿ ತಲುಪಿದೆ.

Ramanagara Silk Cocoon Market Highest Price Bid

ಈ ಕುರಿತು ಪ್ರತಿಕ್ರಿಯಿಸಿದ ರೇಷ್ಮೆ ಸಚಿವ ನಾರಾಯಣ ಗೌಡ “2020-21 ರಲ್ಲಿ ಪ್ರತಿ ಕೆಜಿ ರೇಷ್ಮೆ ಗೂಡಿಗೆ ಸರಾಸರಿ 300 ರೂಪಾಯಿಯಿದ್ದು 2021 ರ ನವೆಂಬರ್ ನಲ್ಲಿ ಪ್ರತಿ ಕೆಜಿ ಗೆ ಸರಾಸರಿ 700-800 ಗೊಂಡಿತ್ತು. ರೇಷ್ಮೆ ಗೂಡಿಗೆ ಹೆಚ್ಚಿನ ದರ ಸಿಗದಂತೆ ನಿಯಂತ್ರಿಸುತ್ತಿದ್ದ ದಲ್ಲಾಳಿಗಳಿಗೆ ಕಡಿವಾಣ, ಮಾರುಕಟ್ಟೆಗಳಲ್ಲಿ ಸಿಸಿಟಿವಿ ಅಳವಡಿಕೆ, ರೇಷ್ಮೆ ಬೆಳೆಗಾರರಿಗೆ ಆಗುತ್ತಿದ್ದ ಕಿರುಕುಳಕ್ಕೆ ಬ್ರೇಕ್, ರೇಷ್ಮೆಗೂಡು ಕದಿಯುತ್ತಿದ್ದವರ ವಿರುದ್ಧ FIR ದಾಖಲಿಸಿ ಕಠಿಣ ಕ್ರಮ, e-Payment ವ್ಯವಸ್ಥೆ ಜಾರಿ ಸೇರಿದಂತೆ ಹಲವು ಸರ್ಕಾರದ ಸುಧಾರಣೆ ಕ್ರಮಗಳಿಂದ ಇಂದು ದಾಖಲೆ ದರಕ್ಕೆ ರೇಷ್ಮೆ ಗೂಡು ಮಾರಾಟವಾಗುವ ಮೂಲಕ ರೈತರಿಗೆ ನೈಜ ಬೆಲೆ ಸಿಗಲು ಕಾರಣವಾಗಿದೆ” ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

- Advertisment -

Most Popular

Karnataka

India

You cannot copy content of this page