
Ranebennur, Haveri : ಬನಶಂಕರಿ ದೇವಿಯ ಜಾತ್ರೆಯ (Banashankari Devi Jathre) ಅಂಗವಾಗಿ ರಾಣೆಬೆನ್ನೂರಿನ ಬನಶಂಕರಿ ದೇವಸ್ಥಾನದಲ್ಲಿ ಬನಶಂಕರಿ ದೇವಿಗೆ ಹೂಗಳಿಂದ ಅಲಂಕಾರ ಮಾಡಿ ಅರ್ಚಕರು ಭಕ್ತರು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ವಿಶೇಷ ಪೂಜೆ ಸಲ್ಲಿಸಿದರು. ದೇವಿಗೆ ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಡಾ.ಸಂಜಯ ನಾಯಕ, ಪಾಟೀಲ ಕುಲಕರ್ಣಿ, ಸರಳಾ ನಾಯಕ, ವೀಣಾ ಮಕರಿ, ವಸಂತ ನಾಯಕ, ಕೈಲಾಸ ನಾಯಕ, ವಿನಾಯಕ ಜೋಶಿ, ವಾಸಂತಿ ನಾಯಕ, ಚಿಂದಬರ ಜೋಶಿ, ಲಲಿತಾ ಹೆಗಡೆ, ಸೌಭಾಗ್ಯ ಪದಕಿ, ಬಸವರರಾಜ ನರಸಗೊಂಡರ, ಪ್ರಭಾಕರ ಮುದಗಲ್ಲ, ಸುದೀರ ಯರಗಟ್ಟಿ, ಪ್ರಕಾಶ ಮೈದೂರ, ವಾಣಿ ನಾಯಕ ಹಾಗೂ ನಾಯಕ ಕುಟುಂಬದವರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.