2024 ರ ರೈಸಿಂಗ್ ರಾಜಸ್ಥಾನ ಗ್ಲೋಬಲ್ ಇನ್ವೆಸ್ಟ್ಮೆಂಟ್ ಶೃಂಗಸಭೆ (Rising Rajasthan Global Investment Summit) ಜೈಪುರ ಎಕ್ಸಿಬಿಷನ್ ಮತ್ತು ಕನ್ವೆನ್ಷನ್ ಸೆಂಟರ್ (JECC-Jaipur Exhibition and Convention Centre) ನಲ್ಲಿ ಡಿಸೆಂಬರ್ 9 ರಿಂದ ಡಿಸೆಂಬರ್ 11ರವರೆಗೆ ನಡೆಯುತ್ತಿದೆ. ರಾಜಸ್ಥಾನಕ್ಕೆ ದೇಶೀಯ ಮತ್ತು ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿರುವ ಈ ಶೃಂಗಸಭೆಯಲ್ಲಿ ದೇಶ-ವಿದೇಶಗಳ ಹೂಡಿಕೆದಾರರು ಭಾಗವಹಿಸುತ್ತಿದ್ದಾರೆ.
ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, “ಭಾರತದ ಸುಧಾರಣೆ, ಸಾಧನೆ, ಮತ್ತು ರೂಪಾಂತರ ಎಲ್ಲ ವಲಯಗಳಲ್ಲಿ ಗೋಚರಿಸುತ್ತಿದೆ” ಎಂದರು. ಸ್ವಾತಂತ್ರ್ಯದ ಬಳಿಕ 11ನೇ ಅತಿದೊಡ್ಡ ಆರ್ಥಿಕತೆಯಾಗಿದ್ದ ಭಾರತ, ಕಳೆದ 10 ವರ್ಷಗಳಲ್ಲಿ 5ನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಇದು ಅಭಿವೃದ್ಧಿಯ ಗುಟ್ಟು “ವಿಕಾಸ್ ಭೀ, ವಿರಾಸತ್ ಭೀ” ಎಂಬ ಮಂತ್ರದಲ್ಲಿದೆ ಎಂದು ಹೇಳಿದರು.
ರಾಜಸ್ಥಾನವನ್ನು ಬಿಜೆಪಿ ಸರ್ಕಾರ ಸುಧಾರಣಾ ನೀತಿಗಳ ಮೂಲಕ ಮತ್ತಷ್ಟು ಅಭಿವೃದ್ಧಿ ಮಾಡುತ್ತಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ತಂತ್ರಜ್ಞಾನ-ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
ರಾಜ್ಯದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ರಾಜ್ಯದ ಪ್ರಗತಿಪರ ಯೋಜನೆಗಳು ಮತ್ತು ಭವಿಷ್ಯದ ಆಕಾಂಕ್ಷೆಗಳನ್ನು ಕುರಿತಂತೆ ಮಾತನಾಡಲಿದ್ದಾರೆ. ಜಾಗತಿಕ ಹೂಡಿಕೆದಾರರು, ಉದ್ಯಮದ ಮುಖಂಡರು, ನೀತಿ ರೂಪಿಸುವವರು ಹಾಗೂ ಸರ್ಕಾರಿ ಅಧಿಕಾರಿಗಳು ಈ ಶೃಂಗಸಭೆಯಲ್ಲಿ ಹೂಡಿಕೆ ಅವಕಾಶಗಳನ್ನು ಚರ್ಚಿಸಲು ಆಗಮಿಸುತ್ತಿದ್ದಾರೆ.